ಮಂಗಳೂರು: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣಾ ಫಲಿತಾಂಶ ರಾಜ್ಯದಲ್ಲಿ ಮರುಕಳಿಸಲಿದೆ ಎಂದು ಎಂದು ಸಂಸದ ನಳಿನ್ ಕುಮಾರ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

may1331kateel

ಸೋಮವಾರ ನಗರದಲ್ಲಿ ಗುಜರಾತ್, ಹಿಮಾಚಲ ಚುನಾವಣೆಯಲ್ಲಿ ಬಿಜೆಪಿಗೆ ಜಯವಾದ ಹಿನ್ನೆಲೆ ಬಿಜೆಪಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿಗೆ ನನ್ನನ್ನು ಕಂಡರೆ ಭಯ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರಿಗೆ ಗುಜರಾತ್ ಚುನಾವಣೆ ಬಳಿಕ ನರೇಂದ್ರ ಮೋದಿಯವರ ಭಯ ಶುರುವಾಗಿದೆ ಎಂದು ಟೀಕಿಸಿದರು.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಜನತೆ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದು, ನವ ಭಾರತ ಕನಸು ಕಂಡಿರುವ ಮೋದಿಯವರಿಗೆ ಈ ಚುನಾವಣಾ ಫಲಿತಾಂಶ ಮತ್ತಷ್ಟು ಉತ್ಸಾಹ ಹಾಗೂ ಬಲ ತಂದಿದೆ ಎಂದರು.

By Suddi9

Leave a Reply

Your email address will not be published. Required fields are marked *