ಶಿಬರೂರು: ಇಲ್ಲಿನ ದೇಲಂತಬೆಟ್ಟು ಗ್ರಾಮದ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಡಿ.15ರಿಂದ 22ರವರೆಗೆ ‘ವರ್ಷಾವಧಿ ಉತ್ಸವ’ ಆಯೋಜಿಸಲಾಗಿದೆ.

ಡಿ. 15ರಂದು ರಾತ್ರಿ 8ಕ್ಕೆ ‘ನವಕ ಪ್ರಧಾನ ಕಲಶಾಭಿಷೇಕ’ ನಡೆಯಲಿದ್ದು, ಬಳಿಕ 10ಕ್ಕೆ ಧ್ವಜಾರೋಹಣ ನೆರವೇರಲಿದೆ.

ಡಿ.16ರಂದು ‘ಮಹೋತ್ಸವ ತಿಬರಾಯನ’ ಜರಗಲಿದ್ದು, ಬೆಳಿಗ್ಗೆ 8ರಿಂದ 10ರವೆರೆಗೆ ತುಲಾಭಾರ ಸೇವೆ ನಡೆಯಲಿದೆ. ಬಳಿಕ 10:30ಕ್ಕೆ ಉಳ್ಳಾದ ದೈವದ ನೇಮೋತ್ಸ ಉರುಳು ಸೇವೆ ಹಾಗೂ ರಾತ್ರಿ 11ಕ್ಕೆ ಕೊಡಮಣಿತ್ತಾಯದೈವದ ನೇಮೋತ್ಸವ-ರಥೋತ್ಸವ ಭಕ್ತರ ಸಮ್ಮುಖದಲ್ಲಿ ಆಯೋಜಿಸಲಾಗಿದೆ.

ಡಿ.17ರಂದು ರಾತ್ರಿ 10ಕ್ಕೆ ಕಾಂತೇರಿ ಧೂಮಾವತಿ ದೈವದ ನೇಮೋತ್ಸವ, ಡಿ.18ರಂದು ರಾತ್ರಿ10ಕ್ಕೆ ಸರಳ ಧೂಮಾವತಿ ದೈವದ ನೇಮೋತ್ಸವ, ಡಿ.19ರಂದು ರಾತ್ರಿ10ಕ್ಕೆ ಜಾರಂದಾಯ ಧೂಮಾವತಿ ದೈವದ ನೇಮೋತ್ಸವ, ಡಿ.20ರಂದು ರಾತ್ರಿ10ಕ್ಕೆ ಕೈಯ್ಯೂರು ದೈವದ ನೇಮೋತ್ಸವ, ಡಿ.21ರಂದು ರಾತ್ರಿ10ಕ್ಕೆ ಪಿಲಿಚಾಮುಂಡಿ ದೈವದ ನೇಮೋತ್ಸವ ಹಾಗೂ ಡಿ.22ರಂದು ಬೆಳಗ್ಗೆ 9ಕ್ಕೆ ತಲಾಭಾರ ಸೇವೆ ಮತ್ತು 10ಕ್ಕೆ ಧ್ವಜಾರೋಹಣ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *