ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಕೃಷಿ ಸಂಶೋಧಕ, ಸಾಧಕ ಡಾ. ಮನಮೋಹನ್ ಅತ್ತಾವರ ಅವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದ್ದಾರೆ.
ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ನ ಸ್ಠಾಪಕಾಧ್ಯಕ್ಷ ಡಾ.ಮನಮೋಹನ್ ಅತ್ತಾವರರವರ ಪುತ್ರ ಸಂತೋಷ್ ಅತ್ತಾವರರವರಿಗೆ ಬರೆದ ಪತ್ರದಲ್ಲಿ ಸಂತಾಪ ಭಾವುಕ ವ್ಯಕ್ತಪಡಿಸಿದ್ದಾರೆ.
ಕೃಷಿ ಕ್ಷೇತ್ರವು ನಷ್ಟವನ್ನು ಅನುಭವಿಸಿ, ಈ ಕ್ಷೇತ್ರಕ್ಕೆ ಬಂಡವಾಳವೇ ಬರದಂತಹ ದಿನಗಳಲ್ಲಿ ಡಾ. ಮನಮೋಹನ್ ರರವರು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖಾಸಗಿ ಬಂಡವಾಳವನ್ನು ತೊಡಗಿಸುವಂತೆ ಮಾಡಿದರು. ಇದರಿಂದಾಗಿ ಕೃಷಿ ಕ್ಷೇತ್ರದಲ್ಲಿ ನವೋತ್ಸಾಹ ಮೂಡಿತಲ್ಲದೇ ಇದಕ್ಕೆಅಗತ್ಯವಿರುವ ಬಂಡವಾಳದ ಹರಿವು ಸಾಧ್ಯವಾಯಿತು. ಅಲ್ಲದೆ, ಕೃಷಿ ತಂತ್ರಜ್ಞಾನವನ್ನು ಸುಸ್ಥಿರವಾಗಿ ರೈತರ ಮನೆ ಬಾಗಿಲಿಗೆ ಮುಟ್ಟಿಸುವಕನಸನ್ನು ನನಸು ಮಾಡಿದ್ದಾರೆ.
ಡಾ.ಮನಮೋಹನ್ ರವರು ಬಹಳಷ್ಟು ಉತ್ಸಾಹಿಗಳಾಗಿದ್ದು, ಕ್ರಿಯಾಶೀಲರಾಗಿದ್ದರು. ಇತ್ತೀಚೆಗಷ್ಟೇ ಕಾರ್ಕಳದಲ್ಲಿ ಅವರ ಸಂಸ್ಥೆಯಿಂದ ಸಂಶೋಧಿಸಲ್ಪಟ್ಟ ಭತ್ತದ ಬೀಜಗಳ ನಾಟಿ ಮಾಡಿಸುವಲ್ಲಿ ಅವರು ತೋರಿಸಿದ ಉತ್ಸಾಹವನ್ನುಕಂಡು ಬೆರಗಾಗಿದ್ದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಗಳಾಗಿದ್ದ ಅವರು ನನ್ನ ಸ್ನೇಹಿತರೂ ಆಗಿದ್ದು, ಶ್ರೇಷ್ಠ ಮಾನವ ಗುಣಗಳನ್ನು ಹೊಂದಿದ್ದರು. ಇವರ ನಿಧನಕ್ಕೆ ವೈಯಕ್ತಿಕವಾಗಿ ತನಗೂ ಆದ ನಷ್ಟ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭಾವುಕ ರಾಗಿದ್ದಾರೆ.
ಅಲ್ಲದೆ, ಮಾತೃ ಸಂಸ್ಥೆ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ನ ಚುಕ್ಕಾಣಿ ಹಿಡಿದಿರುವ ಶ್ರೀ ಸಂತೋಷ್ ಅತ್ತಾವರರವರಿಗೆ ಶುಭಕೋರಿದ್ದಲ್ಲದೇ, ಡಾ.ಮನಮೋಹನ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ.

