ಮಂಗಳೂರು: ಎರಡು ಕೈಗಳಿಲ್ಲದಿದ್ದರೂ ಹಲವಾರು ಅಡೆತಡೆಗಳನ್ನು ಹಿಮ್ಮಟ್ಟಿಸಿ ಸಾಧಿಕ ಉದ್ಯಮಿಯಾದ ಮೂಡಬಿದಿರೆಯ ಗಣೇಶ್ ಕಾಮತ್ ಅವರು ಮಂಗಳೂರು ಪ್ರೆಸ್ ಕ್ಲಬ್ ನ 2017ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನ ಚಿತ್ರ ನಿರ್ದೇಶಕ ಸದಾನಂದ ಸುವರ್ಣ ಹಾಗೂ ನಿವೃತ್ತ ಪ್ರಾಧ್ಯಾಪಕಿ ಪ್ರೊ. ರೀಟಾ ನೊರೋನ್ಹಾ ಇವರ ನೇತೃತ್ವದ ತೀರ್ಪುಗಾರರ ಸಮಿತಿಯು ಮಂಗಳೂರು ಪ್ರೆಸ್ ಕ್ಲಬ್ ನ 2017ನೇ ಸಾಲಿನ ಪ್ರಶಸ್ತಿಗೆ ಗಣೇಶ್ ಕಾಮತ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು ಪ್ರೆಸ್ ಕ್ಲಬ್ ಕೊಡುಗೆ ಮಾಡುವ ಈ ಪ್ರಶಸ್ತಿಯು 10,001 ನಗದು, ಪ್ರಶಸ್ತಿ ಮಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಗಣೇಶ್ ಕಾಮತ್ ಅವರ ವಿದ್ಯಭ್ಯಾಸ 7ನೇ ತರಗತಿಯಾದರು ಸಾಧಿಸುವ ಛಲದಲ್ಲಿ ಮುಂದಿದ್ದರು. ಅವರು 2001ರಲ್ಲಿ ಕಾರ್ಕಳದ ಕ್ರೀಡಾಂಗಣದಲ್ಲಿ ಕಲಸ ನಿರ್ವಹಿಸುತ್ತಿರುವ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದ ತನ್ನ ಎರಡು ಕೈಗಳನ್ನು ಕಳೆದುಕೊಂಡರು. ಬಳಿಕ ಎಲ್ಲಿಯೂ ಉದ್ಯೋಗ ಸಿಗದಿರುವ ಸಂದರ್ಭ ಸಂಗೀತ ಪರಿಕರಗಳನ್ನು ಕೊಂಡು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಬಾಡಿಗೆಗೆ ನೀಡಿತ್ತಿದ್ದರು. ಇದೇ ಸಂಗೀತ ಪರಿಕರಗಳನ್ನು ಮುಂದಿಟ್ಟು ಸಂಸ್ಥೆಯೊಂದನ್ನು ಹುಟ್ಟುಹಾಕಿ ಆ ಮೂಲಕ ಇನ್ನೂ ಹೆಚ್ಚಿನ ಆದಾಯಗಳಿಸತೊಡಗಿದ ಅವರು, ಹೀಗೆ 16 ವರ್ಷಗಳ ಬಳಿಕ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಜ.6ರಂದು ಪ್ರಶಸ್ತಿ ಪ್ರದಾನ: 2018 ರ ಜ.6ರಂದು ಊರ್ವ ಚರ್ಚ್ ಹಾಲ್ ನಲ್ಲಿ ನಡೆಯಲಿರುವ ಪ್ರಸ್ ಕ್ಲಬ್ ದಿನಾಚರಣೆಯಂದು ಮಂಗಳೂರು ಪ್ರೆಸ್ ಕ್ಲಬ್ ನ 2017ನೇ ಸಾಲಿನ ಪ್ರಶಸ್ತಿಯನ್ನು ಗಣೇಶ್ ಕಾಮತ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

