ದಿಲ್ಲಿ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿ ಹಿನ್ನೆಲೆಯಲ್ಲಿ ಜಿಪೆಪಿ ಕಾರ್ಯಕರ್ತರು ಅಣಬೆ ರೀತಿಯ ಕೇಕ್ ಗಳನ್ನು ಕತ್ತರಿಸಿ ವಿಶೇಷವಾಗಿ ಸಂಭ್ರಮ ಆಚರಣೆ ಮಾಡಿದ್ದಾರೆ.
ಈ ಹಿಂದೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಒಬಿಸಿ ಹೋರಾಟಗಾರ ಹಾಗೂ ಕಾಂಗ್ರಸ್ ಅಭ್ಯರ್ಥಿ ಅಲ್ಪೇಶ್ ಠಾಕೂರು, ” ಪ್ರಧಾನಿ ನರೇಂದ್ ಮೋದಿಯವರು ಒಂದು ತಿಂಗಳಿಗೆ 1.20ಕೋ. ರೂ. ವೆಚ್ಚದ ಅಣಬೆಗಳನ್ನಾ ತಿನ್ನುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ರಾಜಕೀಯ ರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಬಿಜೆಪಿ ನಾಯಕ ಹಾಗೂ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಪ್ರಕಟಗೊಂಡ ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಗದ್ದುಗೇರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಣಬೆ ರೀತಿಯ ಕೇಕ್ ಕತ್ತರಿಸಿ ಅಲ್ಪೇಶ್ ಠಾಕೂರು ಹೇಳಿಕೆಗೆ ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.

