ಕೈಕಂಬ: ಅನಾರೋಗ್ಯದಿಂದ ಬಳಲುತ್ತಿದ್ದ ಶಾಲಾ ಬಾಲಕಿಯೊರ್ವಳು ಮೃತಪಟ್ಟ ಘಟನೆ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.
ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯ ನಿವಾಸಿಯಾದ ಹಸನ್ ಹಾಗೂ ರಮ್ಲತ್ ಅವರ ಪುತ್ರಿ ಸಪ್ರೀನಾ (15 )ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.

ಇಲ್ಲಿನ ಬಾಲ್ಮೀ ಶಾಲೆಯ 10 ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಫ್ರೀನಾಳಿಗೆ ಇದಕ್ಕಿದ್ದಂತೆ ಹಳದಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಖಾಸಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮೃತಪಟ್ಟ ವಿಷಯ ತಿಳಿದ ಕೂಡಲೇ ಬಾಲ್ಮೀ ಶಾಲೆಗೆ ರಜೆ ನೀಡಲಾಗಿದೆ.

By suddi9

Leave a Reply

Your email address will not be published. Required fields are marked *