ಮಂಗಳೂರು: ಮೆಸ್ಕಾಂ ಅಧಿಕಾರಿಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಗರದಲ್ಲಿ ನಡೆದಿದೆ.ಮೃತರನ್ನು ಶಿರ್ವ ಮೆಸ್ಕಾಂ ಸೆಕ್ಷನ್ ಆಫೀಸರ್ ರಾಗಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕೆ. ರಹಮತುಲ್ಲಾ ಎಂದು ಗುರುತಿಸಲಾಗಿದೆ.
ರೆಹಮತುಲ್ಲಾ ಅವರು ಶಿರ್ವ ಮೆಸ್ಕಾಂ ಸೆಕ್ಷನ್ ಕಾರ್ಯನಿರ್ವಹಿಸುತ್ತಿದ್ದು, ಬಳಿಕ ನಗರದ ಬೈಂದೂರಿಗೆ ವರ್ಗಾವಣೆ ಗೊಂಡಿದ್ದರು ಎಂದು ತಿಳಿದು ಬಂದಿದೆ.ಈ ಬಗ್ಗೆ ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ.
