ಬಂಟ್ವಾಳ: ಇಲ್ಲಿನ ವಿವೇಕ ಜಾಗೃತ ಬಳಗದ ವತಿಯಿಂದ ಡಿ. 17ರಂದು ‘ನವಮ ವರ್ದಂತ್ಯುತ್ಸವ’ ಕಾರ್ಯಕ್ರಮವನ್ನು ನರಿಕೊಂಬುವಿನ ವಿವೇಕ ಮಂದಿರದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9ರಿಂದ ಶ್ರೀ ದುರ್ಗಾ ಕೃಪಾಂಬುಧಿ ಸಾಮೂಹಿಕ ದುರ್ಗಾಪೂಜೆ ಬಳಿಕ ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಹಿರಿಯ ಆರೋಗ್ಯ ಪರಿವಿಕ್ಷಕ ಜಯರಾಮ ಪೂಜಾರಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸ್ಕಾರ ಭಾರತಿಯ ಜಿಲ್ಲಾ ಸಂಚಾಲಕ ಕಶೆಕೋಡಿ ಸೂರ್ಯನಾರಾಯಣ ಭಟ್ ಹಾಗೂ ಡಿವೈನ್ ಪಾರ್ಕ್‍ನ ಪದಾಧಿಕಾರಿ ರಾಜೇಶ್ ನಾಯರ್ ಉಡುಪಿ ಭಾಗವಹಿಸಲಿದ್ದಾರೆ.

1.30ಕ್ಕೆ ಅನುದೀಪ್ ಎಚ್.ಆರ್. ಚಿಕ್ಕಮಂಗಳೂರು ಮತ್ತು ಬಳಗದಿಂದ ಭಕ್ತಿ ಭಾವ ಗಾನ ಮಂಜರಿ, ವಿಧುಷಿ ಮೀನಾಕ್ಷಿ ಶಾಂತರಾಮ್ ಪುತ್ತೂರು ಮತ್ತು ಶಿಷ್ಯೆಯರಿಂದ ಭಕ್ತಿ ವೀಣಾ ವಾದನ, ಸಂಜೆ 3ಕ್ಕೆ ಬಳಗದ ಕಾರ್ಯಕರ್ತರಿಂದ ಸಾಂಸ್ಕೃತಿಕ ಸಂಧ್ಯಾ,  5:30ರಿಂದ ಕಲ್ಲಡ್ಕ ವಿಠಲ್ ನಾಯಕ್ ಮತ್ತು ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ 7.30ಕ್ಕೆ ಬಳಗದ ಸದಸ್ಯರಿಂದ ಕೋಟಿ-ಚೆನ್ನಯ ಯಕ್ಷಗಾನ ಬಯಲಾಟ ಕಾರ್ಯಕ್ರಮವು ನಡೆಯಲಿದೆ ಎಂದು ಬಳಗದ ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *