ಬಂಟ್ವಾಳ: ಕೇಂದ್ರದ ನರೇಂದ್ರ ಮೋದಿ ಸರಕಾರದ ಮಹತ್ವಕಾಂಕ್ಷಿ ಯೋಜನೆಯಡಿಯಲ್ಲಿ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್ ವಿತರಣಾ ಕಾರ್ಯಕ್ರಮ ಗೋಳಿಕಟ್ಟೆಯಲ್ಲಿ ನಡೆಯಿತು.
ಬಿಜೆಪಿ ಪ್ರಮುಖ ನಾಯಕರಾದ ರಾಜೇಶ್ ನಾೈಕ್ ಉಳಿಪ್ಪಾಡಿ, ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ್, ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ, ಉಪಾಧ್ಯಕ್ಷೆ ಕವಿತಾ ಉಮೇಶ್, ಪಂಚಾಯತ್ ಸದಸ್ಯರು ಸುಜಾತ, ವಸಂತಿ ನಾಯ್ಕ, ಪುರಂದರ, ಸುಮಿತ್ರ, ವಸಂತ, ಕ್ಷೇತ್ರ ರೈತ ಮೋರ್ಚಾದ ಅಧ್ಯಕ್ಷ ತನಿಯಪ್ಪ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕರ್ಕೇರ, ಶಕ್ತಿಕೇಂದ್ರದ ಮಾಜಿ ಕಾರ್ಯದರ್ಶಿ ಗಣೇಶ್ ಬಂಟ್ರಿಂಜ ಉಪಸ್ಥಿತರಿದ್ದರು. ನಾಗೇಶ್ ಭಂಡಾರಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
