ಸುದ್ದಿ9ಪಶ್ಚಿಮ ಬಂಗಾಳದ ರಾಯಭಾರಿಯಾಗಿರುವ ಶಾರೂಖ್ ಖಾನ್ ಕೋಲ್ಕತ್ತಾದಲ್ಲಿ ನಡೆದ ಪೊಲೀಸ್ ಇಲಾಖೆಯ ವರ್ಷಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಲೇಡಿ ಪೊಲೀಸ್ ಶಾರೂಖ್ ಜೊತೆ ಮೈಮರೆತು ಕುಣಿದಿದ್ದರು. ಅಲ್ಲದೇ, ಲೇಡಿ ಪೊಲೀಸಳನ್ನ ಶಾರೂಖ್ ಎತ್ತಿಕೊಂಡಿದ್ದರು. ಇದೀಗ ಈ ಘಟನೆ ಭಾರೀ ಟೀಕೆಗೆ ಗುರಿಯಾಗಿದೆ. ಪೊಲೀಸ್ ಸಮವಸ್ತ್ರ ಧರಿಸಿ ಲೇಡಿ ಪೊಲೀಸ್ ಕುಣಿದಿದ್ದು ತಪ್‌ಉ. ಅದು ಪೊಲೀಸರಿಗೆ ಎಸಗಿದ ಅಪಮಾನ ಎಂದು ಟೀಕೆಗಳು ಕೆಳಿಬಂದಿವೆ. ಸಿಎಂ ಮಮತಾ ಬ್ಯಾನರ್ಜಿ ಎದುರೇ ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಈ ಕುರಿತು ಡ್ಯಾನ್ಸ್ ಮಾಡಿದ ಲೇಡಿ ಪೊಲೀಸ್ ಮತ್ತು ಶಾರೂಖ್ ಖಾನ್’ರಿಂದ ಪ್ರತಿಕ್ರಿಯೆ ಬಂದಿಲ್ಲ.

696615270

By suddi9

Leave a Reply

Your email address will not be published. Required fields are marked *