ಬಿ.ಸಿ.ರೋಡು: ಡಾ.ಬಿ.ಆರ್. ಅಂಬೇಡ್ಕರ್‍ರವರ 61ನೇ ಮಹಾಪರಿನಿರ್ವಾಣ ದಿನವನ್ನು ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು ಇವರು ಅಂಬೇಡ್ಕರ್‍ರವರ ಜೀವನದ ಚರಿತ್ರೆಯನ್ನು ಹೇಳಿದರು.
ಕ್ಷೇತ್ರ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಮಾಜಿ ಶಾಸಕರು ಪದ್ಮನಾಭ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಕ್ಷೇತ್ರ ಎಸ್.ಸಿ ಮೋರ್ಚಾದ ಅಧ್ಯಕ್ಷರು ಗಂಗಾಧರ ಕೋಟ್ಯಾನ್, ದಿನೇಶ್ ಭಂಡಾರಿ, ರಮನಾಥ ರಾಯಿ,ಸೀತಾರಾಮ ಪೂಜಾರಿ,ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿ,ರತ್ನ ಕುಮಾರ್ ಚೌಟ ಉಪಸ್ಥಿತರಿದ್ದರು. ರಮೇಶ್ ಕುದ್ರೆಬೆಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು.
