ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ಸ್ಥಗಿತಗೊಂಡಿದ್ದ ಜೆಸಿಐ ಜೋಡುಮಾರ್ಗ ನೇತ್ರಾವತಿ ಇದರ ನೂತನ ಅಧ್ಯಕ್ಷರಾಗಿ ಸವಿತಾ ನಿರ್ಮಲ್ ಆಯ್ಕೆಗೊಂಡಿದ್ದು, ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಭದಲ್ಲಿ ಇದೇ 10ರಂದು ಸಂಜೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಜೆಸಿಐನ ಮಂಗಳೂರು ಸಾಮ್ರಾಟ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಹೇಳಿದ್ದಾರೆ.

6btl-savitha nirmal
ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ 12ಕ್ಕೂ ಮಿಕ್ಕಿ ಮಂದಿ ತರಬೇತುದಾರರು ಜೆಸಿಐ ಮೂಲಕ ಬೆಳೆದು ಬಂದಿದ್ದಾರೆ. ಸುಮಾರು 120 ದೇಶಗಳಲ್ಲಿ ಸಂಘಟನೆ ಹೊಂದಿರುವ ಜೆಸಿಐ ಸಂಸ್ಥೆಯು ದೇಶದ 25 ವಿಭಾಗಗಳ ಮೂಲಕ ಯುವಜನರಲ್ಲಿವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣ ಬೆಳೆಸುವ ಮಹತ್ಕಾರ್ಯದಲ್ಲಿ ತೊಡಗಿದೆ ಎಂದರು.

ಇದೇ 6ರಂದು ಸಂಜೆ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ತಹಶೀಲ್ದಾರ್ ಪುರಂದರ ಹೆಗ್ಡೆ, ಜೆಸಿಐ ಭಾರತ ಫೌಂಡೇಶನ್ ನಿರ್ದೇಶಕ ಪಿ.ವೈ.ಸುಕುಮಾರ್, ವಲಯಾಧ್ಯಕ್ಷ ಪತ್ರಕರ್ತ ರಾಜೇಶ ಕುಂಜೂರು, ಪುಷ್ಪಾವತಿ ಶರ್ಮ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷೆ ಸವಿತಾ ನಿರ್ಮಲ್, ಅಜಿತ್ ಜೋಷಿ, ಉಮೇಶ ನಾಗನಲಚ್ಚಿಲ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *