ಬಂಟ್ವಾಳ: ಶಿಕ್ಷಣದ ಜೊತೆಯಲ್ಲಿ ರಾಜಕೀಯಕ್ಕೆ ವಿದ್ಯಾರ್ಥಿಗಳು ಹೆಚ್ಚ ಒತ್ತು ನೀಡಬೇಕಾದ ಅನಿವಾರ್ಯತೆ ಇಂದಿನ ಕಾಲಘಟ್ಟದಲ್ಲಿ ಇದೆ, ಶಿಕ್ಷಿತ ವರ್ಗದಿಂದ ಮಾತ್ರ ಈ ದೇಶದ ಅಭಿವೃದ್ದಿ ಸಾಧ್ಯ , ದೇಶದ ಅಭಿವೃದ್ದಿಗೆ ಪೂರಕವಾದ ಆಡಳಿತವನ್ನು ಮಾಡುವ ವ್ಯಕ್ತಿಯನ್ನು ಆರಿಸುವ ಮಹತ್ತರವಾದ ಜವಬ್ದಾರಿ ವಿದ್ಯಾರ್ಥಿ ಸಮುದಾಯಕ್ಕಿದೆ, ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಪ್ಪದೆ ಮತದಾನ ಮಾಡಬೇಕು ಎಂದು ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಹೇಳಿದರು. ಅವರುಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ ಇವರ ವತಿಯಿಂದ ದ.ಕ.ಜಿ.ಪಂ.ಕಿ.ಪ್ರಾಥಮಿಕ ಶಾಲೆ ಕರ್ಪೆ, ಕುಟ್ಟುಕಲದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯ ವಾಕ್ಯದಲ್ಲಿ ಡಿ6ರಿಂದ ಡಿ. 12ರವರೆಗೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.1

ಶಿಬಿರದ ಮೂಲಕ ಶಿಸ್ತು, ಸಂಯಮ, ಮಾನವೀಯತೆ, ನಾಯಕತ್ವದ ಗುಣ ಮತ್ತು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದರು. ಪ್ರೀತಿ ಮತ್ತು ಉತ್ತಮ ಸಂರ್ಪಕದಿಂದ ಮನುಷ್ಯ ಎತ್ತರಕ್ಕೆ ಬೆಳೆಯುತ್ತಾನೆ, ನೈಜವಾದ ಬದುಕು ಶಿಕ್ಷಣ, ಸಂಸ್ಕಾರಯುತವಾದ ಜೀವನದ ಇತಿಹಾಸ ಇಂತಹ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ನಿರ್ಮಾಣವಾಗುತ್ತದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ|ರಾಮರಾಯ ಪ್ರಭು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಪ.ದ.ಕಾಲೇಜಿನ ಪ್ರಾಂಶುಪಾಲ ಪ್ರೋ.ಸತ್ಯನಾರಾಯಣ ಭಟ್ ವಹಿಸಿದ್ದರು.1

ವೇದಿಕೆಯಲ್ಲಿ ಗೇರು ನಿಗಮದ ನಿರ್ದೇಶಕ ಜಗದೀಶ ಕ್ಯೊಲ, ಸಿದ್ದಕಟ್ಟೆ ಸಿ.ಎ.ಬ್ಯಾಂಕಿನ ಅಧ್ಯಕ್ಷ , ಎಪಿಎಂಸಿ ಸದಸ್ಯ ಪದ್ಮರಾಜ್ ಬಲ್ಲಾಲ್ ಮಾವಂತೂರು, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿ, ಗಾ.ಪಂ.ಸದಸ್ಯರಾದ ದೇವಪ್ಪ ಕರ್ಕೇರ, ಶೇಖರ್ ನಾಯ್ಕ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹೊಸ ಮನೆ ಗಣನಾಥ ಶೆಟ್ಟಿ, ದ.ಕ.ಜಿ.ಪಂ.ಕಿ.ಪ್ರಾಥಮಿಕ ಶಾಲೆ ಕರ್ಪೆ ಇದರ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಾಮನ ಬುಣ್ಣನ್, ದ.ಕ.ಜಿ.ಪಂ.ಕಿ.ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರುಡಾಲ್ಪ್ ದೇವಾನಂದ ಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್, ಎನ್.ಎಸ್.ಎಸ್ ಶಿಬಿರದ ನಾಯಕರಾದ ಕೌಶಿಕ್ ಹಾಗೂ ಸ್ವಾತಿ ಮತ್ತು ಕಾಲೇಜಿನ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಬಿರದ ಯೋಜನಾಧಿಕಾರಿ ಶ್ರೀನಿವಾಸ್ ಸ್ವಾಗತಿಸಿ, ಶಿಬಿರಾಧಿಕಾರಿ ಕಾವ್ಯ ವಂದಿಸಿದರು. ಶಿಕ್ಷಕಿ ನಸೀಮಾ ಬೇಗಂ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *