ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಬಿಲ್ಲವ ಭಾಂದವರಿಂದ ಸೇವಾ ರೂಪವಾಗಿ ನ.19ರಂದು ಬಹಳ ವಿಜೃಂಭಣೆಯಿಂದ ಹಿಂದೂ ಸಮಾಜದ ಎಲ್ಲಾ ಬಾಂಧವರ ಸಮಾಕ್ಷಮದಲ್ಲಿ ಸಮರ್ಪಣೆಯಾದ ನೂತನ ಧ್ವಜಸ್ತಂಭದ ಲೆಕ್ಕಪತ್ರ ಮಂಡನೆಯು ಡಿ.3ರಂದು ಭಾನುವಾರ ಸರ್ವಮಂಗಳಾ ಹಾಲ್ ನಲ್ಲಿ ಜರುಗಿತು.
ಬಿಲ್ಲವ ಕೊಡಿಮರ ಸಮಿತಿಯ ಕೋಶಾಧಿಕಾರಿ ಶೇಖರ ಬಳ್ಳಿ ಕೈಕಂಬ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಪುರುಷ ಸಾಲಿಯಾನ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ಸಮಾಜದವರಿಗೂ ದೇವಳದ ಆಡಳಿತ ಮಂಡಳಿಯವರಿಗೂ, ತಂತ್ರಿಗಳು ಹಾಗೂ ಅರ್ಚಕವೃಂದದವರಿಗೂ ಧನ್ಯವಾದವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಪೂಜಾರಿ ಕೊಪ್ಪಲ , ಗೌರವಧ್ಯಕ್ಷ ರಾಮ್ ದಾಸ್ ಕೋಟ್ಯಾನ್ ಮಜಿಲಗುತ್ತು, ಭುವನೇಶ್ ಪಚಿನಡ್ಕ, ಚಂದಪ್ಪ ಅಂಚನ್ ಮಜಿಲಗುತ್ತು, ನಾರಾಯಣ ಎಂ ಬಡಕಬೈಲು, ಸದಾಶಿವ ಕರ್ಕೇರಾ ಕಾಜಿಲ, ಗಣೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಯಶವಂತ ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.



