ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 900 ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಪ್ರಸಿದ್ಧ ಮಂಚಿ -ಕೊಳ್ನಾಡು ಶ್ರೀ ಗೊಪಾಲಕೃಷ್ಣ ದೇವಸ್ಥಾನದಲ್ಲಿ ರೂ 3.25 ಕೋಟಿ ವೆಚ್ಚದಲ್ಲಿ ದೇವರ ಗರ್ಭಗುಡಿ ಸಹಿತ ಸುತ್ತುಗೋಪುರ ಮತ್ತು ಪರಿವಾರ ದೈವಗಳಿಗೆ ನೂತನ ದೈವಸ್ಥಾನ ನಿರ್ಮಾಣಗೊಳಿಸುತ್ತಿರುವುದು ಶ್ಲಾಘನೀಯ. ಭಕ್ತರು ಮತ್ತು ಒಟ್ಟು ಸಮಾಜದ ಏಳಿಗೆಗಾಗಿ ಈ ಪುಣ್ಯಕ್ಷೇತ್ರದ ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವವು ತ್ವರಿತವಾಗಿ ನೆರವೇರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕರ್ನಾಟಕ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಭರವಸೆ ನೀಡಿದ್ದಾರೆ.

3btl-Manchi
ತಾಲ್ಲೂಕಿನ ಮಂಚಿ -ಕೊಳ್ನಾಡು ಶ್ರೀ ಗೊಪಾಲಕೃಷ್ಣ ದೇವಸ್ಥಾನದಲ್ಲಿ ದೇವರ ಗರ್ಭಗುಡಿಗೆ ಶಿಲಾನ್ಯಾಸ ಮತ್ತು ದೈವಗಳ ಪುನರ್ ಪ್ರತಿಷ್ಠೆ ಪ್ರಯುಕ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಮಿತಿ ಸಂಚಾಲಕ ಎನ್.ಆರ್.ಈಶ್ವರ ಭಟ್, ಎನ್.ಕೆ. ಕೃಷ್ಣ ಭಟ್ ಮತ್ತಿತರರು ಇದ್ದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *