ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕªಬೈಲು ಗಾಣೆಮಾರ್ ಇಲ್ಲಿಯ ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರದ ವತಿಯಿಂದ ನಡೆದ ಮಕ್ಕಳ ದಿನಾªಚರಣೆ ಹಾಗೂ ಗ್ರಾಮೀಣ ಮಟ್ಟದ ಚಿಣ್ಣರ ಸಂಗಮದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.ಕರಿಯಂಗಳ ಗ್ರಾ.ಪಂ.ಸದಸ್ಯ ಇಬ್ರಾಹೀಂ ನವಾಝ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್‍ಎಲ್. ರಾಡ್ರಿಗೋಸ್, ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಜಿ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ತಾ.ಪಂ ಸದಸ್ಯ ಯಶವಂತ ಪೂಜಾರಿ,ಅಮ್ಮುಂಜೆ ಗ್ರಾ.ಪಂ ಅಧ್ಯಕ್ಷೆ ಪ್ರೇಮಲತಾ, ಕರಿಯಂಗಳ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ ರಾವ್,ಅಮ್ಮುಂಜೆ ಗ್ರಾ.ಪಂ.ಸದಸ್ಯ ಚಂದ್ರಶೇಖರ ಭಂಡಾರಿ, ಅಮ್ಮುಂಜೆ ಡಿ.ಎ.ಅಬೂಬಕ್ಕರ್,ಕರಿಯಂಗಳ ಉಮೇಶ್ ಆಚಾರ್ಯ, ರಾಜೇಶ್ ಹೆಗ್ಡೆ,ಕೆ.ಎಂ ಅಬೂಬಕ್ಕರ್,ಬಸೀರ್ ಬಡಕಬೈಲು, ರೇಣುಕಾ ಶೇಖರ ಬಂಗೇರಾ ಮತ್ತಿತರರು ಉಪಸ್ಥಿತರಿದ್ದರು.






