ಕೈಕಂಬ:ಕುಪ್ಪೆಪದವು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆಯು ಪಂವಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ,ಮಹಿಳಾ ಕಲ್ಯಾಣ ಇಲಾಖೆಯ ಮಾಲಿನಿ ಗ್ರಾಮದ ಅಭಿವೃದ್ದಿಯಲ್ಲಿ ಮಹಿಳೆಯರೂ ಪಾಲ್ಗೊಲ್ಲಬೇಕೆಂಬ ಉದ್ದೇಶದಿಂದ ಸರಕಾರ 6 ತಿಂಗಳಿಗೊಮ್ಮೆ ಮಹಿಳಾ ಗ್ರಾಮ ಸಬೆ ನಡೆಸಬೇಕೆಂದು ಸೂಚಿಸಿದೆ. ಸಾಮಾನ್ಯ ಗ್ರಾಮ ಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವುದಿಲ್ಲ, ಮಹಿಳೆಯರ ಹಕ್ಕುಗಳು,ದೌರ್ಜನ್ಯಗಳು ಸೇರಿದಂತೆ ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಮಹಿಳಾ ಗ್ರಾಮ ಸಭೆಯಲ್ಲಿ ಚರ್ಚೆ ನಡೆಯಬೇಕು ಮತ್ತು ಅವುಗಳಿಗೆ ಪರಿಹಾರ ಕಂಡು ಕೊಳ್ಳಬೇಕು,
ಕೇಂದ್ರ ಸರಕಾರ ಹೊಸದಾದ ಮಾತೃವಂದನಾ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ, ಮದುವೆಯಾದ ಮಹಿಳೆ ಮೊದಲ ಬಾರಿ ಗರ್ಭಿಣಿಯಾದಾಗ ಕೇಂದ್ರದಿಂದ ನಾಲ್ಕು ಸಾವಿರ ಮತ್ತು ರಾಜ್ಯದ ಆರೋಗ್ಯ ಇಲಾಖೆಯಿಂದ ಒಂದು ಸಾವಿರ ಹೀಗೆ ಒಟ್ಟು ಐದು ಸಾವಿರ ಸಹಾಯದನ ದೊರೆಯಲಿದೆ. ಇದು ಮುಂದಿನ ಜನವರಿಯಿಂದ ಜಾರಿಗೆ ಬರಲಿದೆ.ಎಂದು ಮಾಹಿತಿ ನೀಡಿದೆ.ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಬಗ್ಗೆ ಮಾತನಾಡಿದ ಅವರು ಬಾಲ್ಯ ವಿವಾಹ ಮಾಡಿದ ತಂದೆತಾಯಿಗಳ ಜೊತೆಯಲ್ಲಿ ಬಾಲ್ಯವಿವಾಹಕ್ಕೆ ಸಹಕರಿಸಿದ ಎಲ್ಲರಿಗೂ ಕಠಿನ ಶಿಕ್ಷೆಯ ಅವಕಾಶವಿದೆ ಅಲ್ಲದೆ ಬಾಲ್ಯ ವಿವಾಹದ ಅಮಂತ್ರಣ ಪತ್ರಿಕೆ ಮುದ್ರಿಸಿದವರು ಮದಿವೆ ಹಾಲ್ ನೀಡಿದವರು,ಅಡುಗೆಯವರು ಹೀಗೆ ಭಾಗವಹಿಸಿದ ಎಲ್ಲರ ಮೇಲೂ ಕೇಸು ದಾಖಲಿಸ ಬಹುದಾಗಿದೆ ಎಂದರು.ಬಜಪೆ ಠಾಣೆಯ ಕ್ರೈಂಎಸ್ಐ ರಾಜಾರಾಮ್ ಮಾತನಾಡಿ ಗಂಡುಹೆಣ್ಣು ಎಂದು ತಾರತಮ್ಯ ತೋರದೆ ಸಮಾನವಾಗಿ ನೋಡಬೇಕು. ಅಲ್ಲದೆ ಇಂದಿನ ದಾರಾವಾಹಿಗಳಿಂದ ಆಗುವ ಅನಾಹುತಗಳು, ಮೊಬೈಲ್ ಬಳಕೆಯಿಂದಾಗುವ ಸಮಸ್ಯೆಗಳು ಮತ್ತು ತಮ್ಮ ತಮ್ಮ ಮನೆಯ ಭದ್ರತೆಯ ಬಗ್ಗೆ ವಿವರವಾಗಿ ತಿಳಿಸಿದರು. ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಜ್ಯೋತಿಯವರು ಮಹಿಳೆಯರು ಮತ್ತು ಪುರುಷರಿಗೆ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಡಿ.ಪಿ,ಹಮ್ಮಬ್ಬ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
