ಕೈಕಂಬ:ಮಂಗಳೂರು ತಾಲೂಕಿನ ಮುತ್ತುರು ಗ್ರಾಮ ಪಂಚಾಯಿತ್‍ನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಿತು. ಪಂಚಾಯತ್ ಅದ್ಯಕ್ಷೆ ನಾಗಮ್ಮ ಶಂಕುಸ್ಥಾಪನೆ ನೆರೆವೇರಿಸಿದರು. 2 ವರ್ಷಗಳ ಹಿಂದೆ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮುತ್ತೂರು ಗ್ರಾಮ ಪಂಚಾಯತ್ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸರಕಾರದಿಂದ ಮಂಜೂರಾಗಿರುವ 2ಸೆಂಟ್ಸ್ ಜಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 18 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಸರಕಾರದಿಂದ 10 ಲಕ್ಷ ರೂಪಾಯಿ ಮಂಜೂರಾತಿಯ ಹಂತದಲ್ಲಿದೆ. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ, ಪಂಚಾಯತ್ ಸದಸ್ಯರುಗಳು, ಗ್ರಾಮಸ್ಥರು ಮತ್ತು ಪಂಚಾಯತ್ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
