ಪಡುಬಿದ್ರಿ :ಮೂರು ಕೋಟಿ ದೇವತೆಗಳನ್ನು ಪ್ರತಿನಿಧಿಸುವ ವಿಶ್ವ ಮಾತೆಯಾದ ಗೋವಿನ ಪ್ರತಿಯೊಂದು ಉತ್ಪನ್ನಗಳಲ್ಲೂ ಔಷದೀಯ ಗುಣಗಳಿವೆ. ಇದರಿಂದ ಗೋ ಮಾತೆಯಾಗಿದ್ದಾಳೆ ಎಂದು ಕಿನ್ನಿಗೋಳಿ ಶಕ್ತಿಧಾಮ ಆಶ್ರಮದ ಗುರೂಜಿ ದೇವದಾಸ ರಾವ್ ಹೇಳಿದರು.ಕಿನ್ನಿಗೋಳಿ ಶ್ರೀ ಶಕ್ತಿದರ್ಶನ ಯೋಗಾಶ್ರಮ ತಂಡವು ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಆಡಿಟೋರಿಯ್ಞಂನಲ್ಲಿ ಶನಿವಾರ ಪ್ರಸ್ತುತ ಪಡಿಸಿದ ವಿಶ್ವಮಾತಾ-ಗೋಮಾತಾ ದ್ವಿಭಾಷಾ ನೃತ್ಯ ರೂಪಕವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯದಾಯಕ ಜೀವನಕ್ಕೆ ಪೂರಕವಾದ ಗೋ ಸಂಪತ್ತು ನಾಡಿನ ಮಣ್ಣಿನ ಫಲವತ್ತತೆ ಹಾಗೂ ಅಪಾರ ಗುಣಗಳಿಂದಾಗಿ ಭಾರತದ ಅಮೂಲ್ಯ ಆಸ್ತಿಯಾಗಿದೆ ಎಂದರು.

19-gomata
ಗೋ ಮಾತೆಯ ಮಹತ್ವದ ಅರಿವು ಇಂಥಹ ಉತ್ತಮ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ಸ್ವದೇಶಿ ಗೋ ಸಂರಕ್ಷಣೆ ಮಾಡುವ ಪ್ರಯತ್ನದಿಂದ ದೇಶ ಕ್ಷೇಮವಾಗುತ್ತದೆ ಎಂದು ಉದ್ಯಮಿ ಕಾಪು ಶ್ರೀಧರ ಶೆಣೈ ಅಭಿಪ್ರಾಯಪಟ್ಟರು.ಪೂರ್ಣಪ್ರಜ್ನ ಕಾಲೇಜಿನ ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ ಅಧ್ಯಕ್ಷತೆ ವಹಿಸಿದ್ದರು. ವಿಧುಷಿ ಮೋನಿಕಾ ರಾವ್ ಮಂಗಳೂರು,ಉಪನ್ಯಾಸಕರಾದ ಶ್ರೀಕಾಂತ ರಾವ್, ಡಾ.ಜಯಶಂಕರ್ ಕಂಗಣ್ಣಾಯ, ಸೀತಾಲಕ್ಷ್ಮಿ ಕಾಮತ್ ಇದ್ದರು.

By suddi9

Leave a Reply

Your email address will not be published. Required fields are marked *