ಬಂಟ್ವಾಳ : ಪಾಣೆ ಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಾಳ್ತಿಲ ಗ್ರಾಮದಲಿ ಇಂದಿರಾ ನಮನ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸಿಗರಾದ ಯಮುನಾ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ , ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಐಡಾ ಸುರೇಶ್, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯೆ ದೇವಿಕಾ ರೈ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮಹೇಶ್ ನಾಯಕ್, ಪಂ.ಸದಸ್ಯರಾದ ರಮಣಿ ,ವೀಣಾ, ರೇಣುಕಾ, ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಬಾಳ್ತಿಲ, ಪ್ರಮುಖರಾದ ಭಾರತಿ ರಮಾನಂದ ಪೂಜಾರಿ , ನಾರಾಯಣ ಸಾಲ್ಯಾನ್, ಕೇಶವ ಸಪಲ್ಯ ಮತ್ತಿತರರು ಉಪಸ್ಥಿತರಿದ್ದರು.

KAR_2060

By Suddi9

Leave a Reply

Your email address will not be published. Required fields are marked *