ಕೈಕಂಬ:ಮಂಗಳೂರು ಸಮೀಪದ ಪಲ್ಗುಣಿ ನದಿ ತೀರದ ಗುರುಪುರ ಪೇಟೆಯ ಚಾಮಣಿ ರಸ್ತೆಯಲ್ಲಿ ಶ್ರೀ ರಾಮ ನಿವಾಸದಲ್ಲಿ ಜನಿಸಿದ ಇವರು ಶ್ರೀನಿವಾಸ್ ಮತ್ತು ವಸಂತಿ ದಂಪತಿಗಳ ಪುತ್ರ. ಪೂರ್ಣ ಹೆಸರು ಶ್ರೀಕಾಂತ್ ಗಾಣಿಗ ಶ್ರೀನಿವಾಸ್ ಇವರ ಕಾವ್ಯನಾಮ ಶ್ರೀ.ಜಿ.ಎಸ್ ಗುರುಪುರ. ತನ್ನ ಚಿಕ್ಕ ವಯಸ್ಸಿನಿಂದಲೇ ಕಲಾ ಆಸಕ್ತಿಯನ್ನು ಹೊಂದಿದ ಇವರು ಚಿತ್ರಕಲೆ ಕ್ಲೇಮಾಡಲಿಂಗ್‍ನಲ್ಲಿ ಗುರುತಿಸಿಕೊಂಡವರು.ಪ್ರತಿಭಾಕಾರಂಜಿಯ ಮೂಲಕ 6ನೇ ತರಗತಿಯಲ್ಲಿ ಮೊದಲ ಬಾರಿಗೆ ನಾಟಕ ರಂಗಕ್ಕೆ ಬಣ್ಣ ಹಚ್ಚಿದರು. ಇಲ್ಲಿಂದ ಆರಂಭಗೊಂಡ ರಂಗಭೂಮಿ ಒಲವು ಮತ್ತೆ ಮತ್ತೆ ಬಣ್ಣ ಹಚ್ಚುವಂತೆ ಪ್ರೇರೆಪಿಸಿತು. ಕಾಲೇಜು ಜೀವನದಲ್ಲಿ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿದ ಇವರು ನಂತರದ ದಿನಗಳಲ್ಲಿ ಹಲವಾರು ನಾಟಕ, ನಿರೂಪಣೆ, ಸಾಹಿತ್ಯಾ ಕಥೆಗಳನ್ನು ಬರೆಯಲು ಆರಂಭಿಸಿದರು. ಬೆಸೆಂಟ್ ಸಂದ್ಯಾ ಕಾಲೇಜಿನಲ್ಲಿ ಪದವಿ ಮುಗಿಸಿ ಪ್ರತಿಷ್ಠಿತ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು,
ತನ್ನ ಕಲಾ ಜೀವನವನ್ನು ಮುಂದುವರಿಸುತ್ತಾ ಕೋರಿಯೋಗ್ರಾಫರಾಗಿ ಗುರುತಿಸಿಕೊಂಡವರು. ಹವ್ಯಾಸಿ ಕಲಾವಿದನಾಹಿದ್ದ ಇವರು ಈಗ ರಂಗ್‍ದ ಕಲಾವಿದರು ಗುರುಪುರ ತಂಡದಲ್ಲಿ ಪ್ರಸಿದ್ಧ ಕಲಾವಿದನಾಗಿ ಬೆಳೆಯುತ್ತಿದ್ದು. ಅಲ್ಲದೆ ಕನ್ನಡ ತುಳು ಭಾಷೆಯ ಸೊಗಡಿನಲ್ಲಿ ತನ್ನದೆ ಆದ ಸಾಹಿತ್ಯ ಚಾತುರ್ಯದ ಮೂಲಕ ಗೀತರಚನೆಗಾರರಾಗಿ ಗುರುತಿಸಿ ಕೂಂಡವರು ನೂರಾರು ಕವಿತೆಗಳಿಗೆ ಜೀವ ತುಂಬುತ್ತ ಬಂದಿದ್ದಾರೆ.ಲಯಾನ್ ಕಿಶೋರ್ ಡಿ.ಶೆಟ್ಟಿ, ನವೀನ್ ಶೆಟ್ಟಿ ಅಳಕೆ, ದಿನೇಶ್ ಅತ್ತಾವರ್, ಶೋಭ ಶೆಟ್ಟಿ ಶಕ್ತಿನಗರ, ರಾಜ್ ಬಿ.ಶೆಟ್ಟಿ ಮುಂತದ ಹಲವಾರು ಮಹಾನ್ ಕಲಾವಿದರಿಂದ ಪ್ರಶಂಸೆಗಿಟ್ಟಿಸಿಕೊಂಡವರು. ಅಪರೂಪದ ಅಪ್ರತಿಮ ಪ್ರತಿಭೆ ವಜ್ರದೇಹಿ ಗರಡಿಯಲ್ಲಿ ಬೆಳೆದ ಈ ಗ್ರಾಮಿಣ ಪ್ರತಿಭೆಗೆ ಸ್ಪೂರ್ತಿಯಗಿ ನಿಂತವರು ಪರಮ ಪೂಜ್ಯ ಶ್ರೀ ರಾಜಶೇಖರನಂದ ಸ್ವಾಮಿಜಿಯವರು.
ವಜ್ರದೇಹಿ ಶ್ರೀಗಳ ಆರ್ಶೀವಾದ,ರಂಗ್‍ದ ಸಾರಥಿ ಪ್ರಶಾಂತ್ ಗುರುಪುರ ಮಾರ್ಗದರ್ಶನದೊಂದಿಗೆ, ರಂಗ್‍ದ ಕಲಾವಿದರು ವಜ್ರದೇಹಿ ಬಲಗ ಕಲಾಂಜಲೀ ಕ್ರಿಯೇಷನ್ಸ್, ಮಂಜೇಶ್ವರ ಹಾಗೂ ಹತ್ತು ಹಲವಾರು ಸ್ನೆಹಿತರುಗಳ ಸಹಕಾರ ಮತ್ತು ತನ್ನ ಊರಿನ ಜನರ ಬೆಳವಣಿಗೆಗೆ ಕಾರಣ ಎಂದು ಜಿ.ಎಸ್ ಮನದಾಳದ ಮಾತನ್ನು ತೆರೆದಿಟ್ಟರು. ಇವರು ಬರೆದ ಧರ್ಮಸಾರಥಿ ಹಾಡು, ರಂಗ್‍ದ ಕಲಾವಿದರು, ನಮ್ಮ ಜವನೆರ ಕಥೆ, ಕಡಲ ಬರಿ, ಸೌಜನ್ಯ ಗೀತೆ, ನಮೋ ಮೋದಿ, ಎನ್ನ ಅಪ್ಪೆ, ಹೀಗೆ ಹಲವಾರು ಗೀತೆಗಳು ಜನ ಮನ ಗೆದ್ದು ಕೊಂಡಿದೆ.
ಜಿ.ಎಸ್ ಇವರು ಕಲಾವಿಧರ ಸಂಘ, ಕವಿ ಸಂಘದಲ್ಲಿ ಗುರುತಿಸಿ ಕೊಂಡವರು ಹಲವಾರು ರಂಗ ಕಲಾವಿದರು ಮತ್ತು ಮಹನ್ ಕವಿಗಳ ಒಡನಾಟ ಹೊಂದಿದ್ದಾರೆ. ಯಕ್ಷಗಾನದ ಬಗ್ಗೆಯು ಒಲವು ತೋರಿದ್ದು ಅದರಲ್ಲೂ ತನ್ನನ್ನು ತೊಡಗಿಸಿ ಕೊಳ್ಳುತ್ತಿದ್ದಾರೆ, ಯಕ್ಷತಾರೆ ಸುನಿಲ್ ಪಲ್ಲಮಜಲ್‍ರವರಿಂದ ಪ್ರೇರಿತನಾಗಿ ಅವರ ಮಾರ್ಗದರ್ಶದಲ್ಲಿ ಮುನ್ನಾಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಸಂಗಳನ್ನು ಬರೆಯುವಾಚೆ ಮನಸ್ಸು ಮಾಡಿದ್ದಾರೆ. ಸಾಹಿತ್ಯ ರಂಗದಲ್ಲಿ ಕೃಷಿ ಮಾಡುತ್ತ ಸಿನಿಮ ರಂಗದತ್ತ ಹೆಜ್ಜೆ ಇಡುತ್ತಿದ್ದಾರೆ.
ಸಿನಿಮಕ್ಕೆ ಕಥೆ ಸಂಭಾಷಣೆ ಚಿತ್ರಕಥೆ,ಹಾಡುಗಳನ್ನು ಬರೆಯುವ ಅವಕಾಶಗಳು ಒದಗಿ ಬಂದಿದ್ದು ಹೆಮ್ಮೆಯ ವಿಷಯವಾಗಿದೆ. ತುಳುನಾಡಿನ ಸಾಹಿತ್ಯ ಕೃಷಿಯೊಡನೆ ತನ್ನ ಊರಿನ ಇತಿಹಾಸ ಆಧ್ಯಯನವನ್ನು ಮಾಡಿ” ಪೆರ್ಮೆದ ಗುರುಪುರ” ಪುಸ್ತಕವನ್ನು ಬರೆಯುತ್ತಿದ್ದು,
ಇವರು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಾಟಕ, ಸಾಹಿತ್ಯ ಸಿನಿಮಾಗಳನ್ನು ನೀಡಲಿ ತುಳುನಾಡಿನಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುವಂತಾಗಲಿ ಎಂದು ಹಾರೈಸುವ ಜಿ.ಎಸ್ ಅಭಿಮಾನಿಗಳು, ದೇವರು ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ. ತುಳುನಾಡಿಗೆ ನಿಮ್ಮ ಕೊಡುಗೆ ಅಜರಾಮರವಾಗಲಿ ಎಂದು ಹೃದಯ ಸ್ಪರ್ಷಿಯಾಗಿ ಆಶಿಸುತ್ತೇವೆ.
ಲೇಖನ: ಸುಪ್ರೀತ ಭಂಡಾರಿ ಸೂರಿಂಜೆ.





