ಬಿಸಿರೋಡು: ಶ್ರೀ ರಾಜರಾಜೇಶ್ವರೀ ದೇವಳದ ಜೀಣೋದ್ಧಾರದ ಪ್ರಕ್ರೀಯೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳದ ನೂತನ ಧ್ವಜಸ್ತಂಭವನ್ನು ಬಿಲ್ಲವಸಮಾಜದ ವತಿಯಿಂದ ಸೇವಾ ರೂಪವಾಗಿ ಸಮರ್ಪಿಸುವ ಕುರಿತು ನೂತನ ಧ್ವಜಸ್ತಂಭದ ನಿರ್ಮಾಣ ಸಮಿತಿಯ ವತಿಯಿಂದ ಬಿಸಿರೋಡು ಪ್ರೆಸ್ ಕ್ಲಬ್ ನಲ್ಲಿ ನ.14ರಂದು ಪತ್ರಕಾಗೋಷ್ಟಿ ನಡೆಸಲಾಯಿತು.14 vp press meet 1

14vp press meet

  ನ.19 ರಂದು ಬೆಳಗ್ಗೆ 9.ಗಂಟೆಗೆ ಬಿಸಿರೋಡು ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಿಂದ ವಿಧ ವಾದ್ಯ ಘೋಷಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಪೊಳಲಿಗೆ ತರುವುದೆಂದು ತೀರ್ಮಾನಿಸಲಾಯಿತು. ಗೊಂಬೆಬಳಗ, ಕಾರ್ಣಿಕ ಪುರುಷರ ವಿವಿಧ ಟ್ಯಾಬ್ಲೋ, ಭಜನೆ, ನಾಶಿಕ್ ಬ್ಯಾಂಡ್, ಕೊಂಬು, ಚೆಂಡೆ ಬಳಗ, ಬ್ಯಾಂಡ್ ವಾದ್ಯ ಶೋಭಾಯತ್ರೆಗೆ ಮೆರುಗು ನೀಡಲಿದೆ. ಸ್ವಾಮೀಜಿಗಳು ವಿವಿಧ ಧಾರ್ಮಿಕ ಮುಖಂಡರು , ದೇವಳದ ಪ್ರಮುಖರು ಹಾಗೂ ಎಲ್ಲಾ ಸಮಾಜದ ಬಾಂದವರು ಬಾಗವಹಿಸಲಿದ್ದಾರೆ . ಸುಮಾರು 10ಸಾವಿರ ಜನರು  ಭಾಗವಹಿಸುವ ನಿರೀಕ್ಷೆ ಇದೆ ಎಂದು  ನೂತನ ಕೊಡಿಮರ ನಿರ್ಮಾಣ ಸಮಿತಿಯ ಪ್ರ.ಕಾರ್ಯದರ್ಶಿ ಪುರುಷ ಸಾಲಿಯಾನ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಣ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಗೌರವಧ್ಯಕ್ಷ ರಾಮ್‍ದಾಸ್ ಮಜಿಲಗುತ್ತು, ಭಾರತ್ ಕೊಪರೇಟಿವ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಪೂಜಾರಿ ಕೊಪ್ಪಳ , ಚಂದ್ರಶೇಖರ ಕೈಕಂಬ, ಯಶವಂತ ಕೋಟ್ಯಾನ್,ಚಂದಪ್ಪ ಅಂಚನ್ ಮಜಿಲಗುತ್ತು, ನಾರಾಯಣ ಎಂ.ಅಮ್ಮುಂಜೆ  ,ಮೋಹನ್ ಸಾಲಿಯಾನ್  ಉಪಸ್ಥಿತರಿದ್ದರು.

*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

By Suddi9

Leave a Reply

Your email address will not be published. Required fields are marked *