ಬಂಟ್ವಾಳ : ಶ್ರೀ ಭಯಂಕೇಶ್ವರ ಶ್ರೀ ಸದಾಶಿವ, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪಾಣೆಮಂಗಳೂರು ನರಿಕೊಂಬು ಗ್ರಾಮ ಇಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ಸೋಮವಾರ ಅಂಗವಾಗಿ ಶ್ರೀ ಮಹಾಗಣಪತಿ ದೇವರಿಗೆ ಫಲಪಂಚಾಮೃತ ಅಭಿಷೇಕ, ಪಂಚಕಜ್ಜಾಯ ಸೇವೆ, ಪ್ರಸನ್ನ ಪೂಜೆ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಶ್ರೀ ಸದಾಶಿವ ದೇವರಿಗೆ ಕಾರ್ತಿಕ ಸೋಮವಾರ ಅಂಗವಾಗಿ ಬೊಂಡಾಭಿಷೇಕ, ರುದ್ರಾಭಿಷೇಕ, ಕಲ್ಪೋಕ್ತ ಪೂಜೆ , ಮಹಾಮಂಗಳಾರತಿ, ಪ್ರಸಾದ ವಿತರಣೆ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಜರಗಿತು.

