ಕರ್ನಾಟಕ ಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೃಷಿ ವಿರೋಧಿ ನೀತಿ ವಿರುದ್ಧ ಬ್ರಹತ್ ಪ್ರತಿಭಟನಾ ಸಭೆ ಮತ್ತು ಪ್ರದಾನಿ ಹಾಗೂ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ 15/11/17 ಬುಧವಾರದಂದು ಪುತ್ತೂರಿನಲ್ಲಿ ಬೆಳಿಗ್ಗೆ 10 ಗಂಟೆಗೆ ಜರಗಲಿದೆ.
ರೈತರ ಎಲ್ಲಾ ಕೃಷಿ ಸಾಲ ಮನ್ನಾ ಮಾಡುವಂತೆ, ಡಾ.ಎಂ.ಎಸ್ ಸ್ವಾಮಿನಾಥನ್ ಆಯೋಗದವರ ವರದಿಯಂತೆ ರೈತರಿಗೆ ಮಾರುಕಟ್ಟೆ ದರ ಒದಗಿಸುವುದು ನಾಗರಿಕರ ಹೆಬ್ಬೆರಳು ಗುರುತಿಗಾಗಿ ಸತಾಯಿಸುವುದನ್ನು ನಿಲ್ಲಿಸುವಂತೆ ಕುಮ್ಕಿ ಜಮೀನು ಹಕ್ಕು ಪತ್ರ ಕೂಡಲೇ ನೀಡುವಂತೆ ಒತ್ತಾಯಿಸಿ ಪ್ರವಾಸಿ ಹಾಗೂ ಮುಖ್ಯ ಮಂತ್ರಿಗೆ ಎ.ಸಿ.ಯವರ ಮೂಲಕ ಮನವಿ ಸಲ್ಲಿಸಲಾಗುವುದು.
ಬಂಟ್ವಾಳ ತಾಲೂಕಿನ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತ ಹಿತಾಶಕ್ತಿ ಉಳಿಸಿ ಬೆಳೆಸುವಂತೆ ಬಂಟ್ವಾಳ ತಾಲೂಕು ರೈತ ಸಂಘ ಹಸಿರುಸೇನೆ ಅಧ್ಯಕ್ಷ ಶರತ್ ಕುಮಾರ್, ಉಪಾಧ್ಯಕ್ಷ ಎನ್.ಕೆ ಇದಿನಬ್ಬ, ಸಂಚಾಲಕ ಎಂ ಸುಬ್ರಮಣ್ಯ ಭಟ್, ಕಾರ್ಯದಶರ್ಿ ಮನೋಹರ್ ಶೆಟ್ಟಿ ಸಂಯಕ್ತವಾಗಿ ವಿನಂತಿಸಿರುತ್ತಾರೆ.
