ಬಂಟ್ವಾಳ: ಸಿವಿಲ್ ವಿಭಾಗದ ಹಿರಿಯ ನ್ಯಾಯದೀಶರಾಗಿ ಪಧೋನ್ನತಿ ಹೊಂದಿ ಕಲಬುರ್ಗಿ ಜಿಲ್ಲೆಯ ಅಲಂದ ತಾಲೂಕಿಗೆ ವರ್ಗಾವಣೆಗೊಂಡಿರುವ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯದೀಶರಾದ ಪ್ರಕಾಶ್ ಸಿಡಿ ಅವರಿಗೆ ಬಂಟ್ವಾಳ ವಕೀಲರ ಸಂಘದ ವತಿಯಿಂದ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ವಕೀಲರ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಹಿರಿಯ ವಿಭಾಗದ ನ್ಯಾಯದೀಶರಾದ ಚಂದ್ರಶೇಖರ್ ಯು, ಜೆ.ಎಂ.ಎಫ್.ಸಿ ನ್ಯಾಯದೀಶೆ ಪ್ರತಿಭಾ ಡಿ.ಎಸ್, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಉಪಾಧ್ಯಕ್ಷರಾದ ಸುರೇಶ್ ನಾವೂರ, ಜೊತೆ ಕಾರ್ಯದರ್ಶಿ ವಿನೋದ, ವಕೀಲರಾದ ಅಶ್ವಿನ್ ಕುಮಾರ್ ರೈ, ಜಯರಾಮ ರೈ, ರಮೇಶ್ ಉಪಾಧ್ಯಯ, ಸತೀಶ್ ಶಿವಗಿರಿ ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ನ್ಯಾಯಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ರವೀಂದ್ರ ಕುಕ್ಕಾಜೆ ಸ್ವಾಗತಿಸಿ, ರಾಜರಾಂ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
