ಹೆಬ್ರಿ:(ಹಿರಿಯಡ್ಕ)- ಕನ್ನಡ ಸಂಘ ಬೆಂಗಳೂರು ಮತ್ತು ವಿಶ್ವ ವೀರ ಶೈವ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ನವಂಬರ್.14 ರಂದು ಬೆಂಗಳೂರಿನ ನಯನ ಸಭಾ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆ ಮತ್ತು ಪಂಡಿತ್ ನೆಹರುರವರ ನೆನಪುಗಳು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಕನ್ನಡ ಶ್ರೀ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯಿಂದ ಯುವ ಸಾಮಾಜಿಕ ಕಾರ್ಯಕರ್ತ ಜೇಸಿಐ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲುರವರು ಆಯ್ಕೆಯಾಗಿದ್ದಾರೆ.

ಕಳೆದ 10 ವರ್ಷಗಳಿಂದ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತನ್ನನು ತಾನು ತೊಡಗಿಸಿಕೊಂಡಿರುವ ಇವರು ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ನಾಡಿನಾದ್ಯಂತ 500 ಕ್ಕು ಮಿಕ್ಕಿದ ತರಬೇತಿ ನೀಡಿದ್ದಾರೆ.ಅಲ್ಲದೆ 31 ಬಾರಿ ರಕ್ತದಾನ ಮಾಡಿ,ನೇತ್ರದಾನವನ್ನು ಕೂಡ ನೊಂದಾಯಿಸಿದ್ದಾರೆ.
ಪ್ರಶಸ್ತಿಯನ್ನು ಚಿಕ್ಕಪೇಟೆ ಮಠದ ಶಿವಾಚಾರ್ಯ ಶಿವಮೂರ್ತಿ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಎಂ.ವಿ ರಾಜಶೇಖರನ್,ಬಿಬಿಎಂಪಿಯ ಕಾರ್ಪೋರೇಟರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
