ಬಂಟ್ವಾಳ:ತಾಲ್ಲೂಕಿನ ಮಂಚಿ ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟಿನ ವತಿಯಿಂದ 10ನೇ ವರ್ಷದ ‘ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ’ ಕಾರ್ಯಕ್ರಮ ಪ್ರಯುಕ್ತ ಡಿ.24ರಿಂದ 25ರತನಕ ವಿಟ್ಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಮಟ್ಟದ ನಾಟಕ ಮತ್ತು ತೆಂಕು ತಿಟ್ಟಿನ ಯಕ್ಷಗಾನ ಸ್ಪರ್ಧೆ ಆಯೋಜಿಸಲಾಗಿದೆ. ಡಿ.31ರಂದು ಇಲ್ಲಿನ ಕುಕ್ಕಾಜೆ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದಲ್ಲಿ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿದೆ.

ಕನ್ನಡ ರಂಗಭೂಮಿಯನ್ನು ಜಗದ್ವಿಖ್ಯಾತಗೊಳಿಸಿದ ದಿ| ಬಿ.ವಿ.ಕಾರಂತರ ನೆನಪಿನಲ್ಲಿ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ) ಯ ಆಶ್ರಯದಲ್ಲಿ ವರ್ಷಂಪ್ರತಿ ಜರಗುತ್ತಿರುವ “ಬಿ.ವಿ.ಕಾರಂತರ ನೆನಪಿನ ಮಂಚಿ-ನಾಟಕೋತ್ಸವ” ಹತ್ತನೇ ವರ್ಷದ ಆಚರಣೆಯಲ್ಲಿದೆ. ದಶಮಾನೋತ್ಸವದ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ನಾಟಕ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಅಂದು ಬೆಳಿಗ್ಗೆ ಗಂಟೆ 9 ರಿಂದ ಸಂಜೆ 7ರ ತನಕ ಸ್ಪರ್ಧೆ ನಡೆಯಲಿದ್ದು, ಆಸಕ್ತ ತಂಡಗಳು ಕೂಡಲೇ ಅಧ್ಯಕ್ಷರು, ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್(ರಿ.) ಮಂಚಿ, ಬಂಟ್ವಾಳ ತಾಲೂಕು (ದ.ಕ.) ಇವರಿಗೆ ಭಾಗವಹಿಸುವ ಬಗ್ಗೆ ಒಪ್ಪಿಗೆ ಪತ್ರ ಕಳುಹಿಸಿಕೊಡಬೇಕಾಗಿ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *