ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ವಯೋ ನಿವೃತ್ತಿಗೊಂಡ ಎಎಸ್.ಐ ಬಾಸ್ಕರ್ ಅವರ ವಿದಾಯ ಸಮಾರಂಭ ಮತ್ತು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಎಸ್.ಐ.ಗಳಾದ ರಕ್ಷಿತ್ ಗೌಡ, ಉಮೇಶ್ ಮತ್ತು ಎ.ಎಸೈ ರುಕ್ಮಯ ಗೌಡ ಸಹಿತ ಪೊಲೀಸರಾದ ರಾಮಯ್ಯ ಗೌಡ, ಇಬ್ರಾಹಿಂ, ಚಂದ್ರಶೇಖರ, ಸುರೇಶ್, ಸೀತಾರಾಮ್ ಗೌಡ, ಶೈಲೇಶ್, ಜಗದೀಶ, ಪ್ರವೀಣ, ಸುನೀತಾ, ರಮೇಶ್ ನಾಯ್ಕ ಇವರಿಗೆ ಬಿ.ಸಿ.ರೋಡ್ನಲ್ಲಿ ಈಚೆಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ವೈದ್ಯಾಧಿಕಾರಿ ಸುರೇಂದ್ರ ನಾಯಕ್, ಸೇವಾಂಜಲಿ ಪ್ರತಿಷ್ಟಾನ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ಎಸೈ ಚಂದ್ರಶೇಖರ್, ನಾಗರಾಜ್ , ಯಲ್ಲಪ್ಪ, ಪ್ರಸನ್ನ ಕುಮಾರ್ ಮತ್ತಿತರರು ಇದ್ದರು.
