ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ವಯೋ ನಿವೃತ್ತಿ ಹೊಂದಿದ ಎ.ಎಸ್.ಐ ಬಾಸ್ಕರ್ ಅವರ ವಿದಾಯ ಸಮಾರಂಭ ಮತ್ತು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಎಸ್.ಐ.ಗಳಾದ ರಕ್ಷಿತ್ ಗೌಡ, ಉಮೇಶ್ ಮತ್ತು ಎ.ಎಸ್.ಐ ರುಕ್ಮಯ ಗೌಡ, ಹೆಚ್.ಸಿಗಳಾದ ರಾಮಯ್ಯ ಗೌಡ, ಇಬ್ರಾಹಿಂ, ಚಂದ್ರಶೇಖರ, ಸುರೇಶ್, ಸೀತಾರಾಮ್ ಗೌಡ, ಶೈಲೇಶ್ ಹಾಗೂ ಪಿಸಿಗಳಾದ ಜಗದೀಶ, ಪ್ರವೀಣ,ಸುನೀತಾ, ರಮೇಶ್ ನಾಯ್ಕ ಅವರ ಬೀಳ್ಕೋಡುಗೆ ಸಮಾರಂಭ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುರೇಂದ್ರ ನಾಯಕ್, ಸೇವಾಂಜಲಿ ಪ್ರತಿಷ್ಟಾನದ ಕೃಷ್ಣ ಕುಮಾರ್ ಪೂಂಜಾ, ನಗರ ಠಾಣಾ ಎಸ್.ಐ. ಚಂದ್ರಶೇಖರ್, ವಿಟ್ಲ ಎಸ್.ಐ ಠಾಣೆಯ ನಾಗರಾಜ್ , ಸಂಚಾರ ಠಾಣೆಯ ಎಸ್.ಐ ಯಲ್ಲಪ್ಪ, ಗ್ರಾಮಾಂತರ ಠಾಣಾ ಎಸ್.ಐ ಪ್ರಸನ್ನ, ಬಂಟ್ವಾಳ ವೃತ್ತದ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.



