ಬಂಟ್ವಾಳ :ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಅ. 29 ಹಾಗೂ ಅ. 30 ರಂದು ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಮೈಸೂರು ವಿಭಾಗ ಮಟ್ಟವನ್ನು ಪ್ರತಿನಿ„ಸಿದ ಬಂಟ್ವಾಳ ತಾ| ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕರನ್ನೊಳಗೊಂಡ ತಂಡವು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಇದೇ ಶಾಲೆಯ ಐದು ವಿದ್ಯಾರ್ಥಿಗಳು ಭಾಗವಹಿಸಿದ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

3110pkt3 3110pktG1
ಬಾಲಕರ ವಿಭಾಗದಲ್ಲಿ ವಗ್ಗ ಮೊರಾರ್ಜಿ ಶಾಲೆಯ ಪಾಂಡುರಂಗ ತಂಡದ ನಾಯಕನಾಗಿ ಹಾಗೂ ಮಲ್ಲಿಕಾರ್ಜುನ, ಸಿದ್ದು, ಮಂಜು, ಬಂಟ್ವಾಳ ಸುರಿಬÉೈಲ್ ದಾರುಲ್ ಅಷ್ ಅರಿಯಾ ಶಾಲೆಯ ಮೊಯಿದ್ದಿನ್ ಬಾತಿಷ್ , ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಿರಣ್, ಬೆಳ್ತಂಗಡಿಯ ಸೈಂಟ್ ಮೇರೀಸ್ ಶಾಲೆಯ ಮೊಹಮ್ಮದ್ ರಾಯಿಸ್ ಹಾಗೂ ಕಲ್ಲಡ್ಕದ ಶ್ರೀರಾಮ ಶಾ¯ಯÉ ನಿಖಿಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸುಶ್ಮಿತಾ, ಭವಾನಿ, ನಳನಾಕ್ಷಿ, ಕುಶಾಲಾಕ್ಷಿ, ಐಶ್ವರ್ಯ ಬಾಲಕಿಯರ ತಂಡದಲ್ಲಿ ದ್ದು, ಸುಷ್ಮಿತಾ ದ್ವಿತೀಯ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಶಾಲೆಯ ದೈಹಿಕ ಶಿಕ್ಷಕ ಆಸೀದ್ ಪಡಂಗಡಿ, ರಾಧಾಕೃಷ್ಣ ಮಚ್ಚಿನ , ಸೌಮ್ಯ ಕಾಣಿಯೂರು ತರಬೇತಿ ನೀಡಿದ್ದರು. ಪ್ರಾಂಶುಪಾಲ ಶ್ರೀನಿವಾಸ್ ಮತ್ತು ವ್ಯವಸ್ಥಾಪಕರಾದ ಅಖಿಲ್ ಶೆಟ್ಟಿ, ಮಂಜುನಾಥ ದಾಸ್, ಜಯರಾಮ ಮಾರ್ಗದರ್ಶನ ನೀಡಿದ್ದರು.

ಕಬಡ್ಡಿ ತಂಡಕ್ಕೆ ವಗ್ಗದಲ್ಲಿ ವಿಶೇಷ ಸ್ವಾಗತ

ವಗ್ಗ ಕಾರಿಂಜ ಕ್ರಾಸ್‍ಗೆ ಆಗಮಿಸಿದ ವಿಜೇತÀ ತಂಡವನ್ನು ಶ್ರೀ ಕಾರಿಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ , ಶಾಲಾಭಿವೃದ್ಧಿ ಸಮಿತಿ ಸದಸ್ಯ ಪಿ. ಜಿನರಾಜ ಆರಿಗ ಅವರು ಸ್ವಾಗತಿಸಿ, ಮಾಲಾರ್ಪಣೆ ನಡೆಸಿ ಅಭಿನಂದನೆ ಸಲ್ಲಿಸಿದರು. ಬಳಿಕ ತಂಡವನ್ನು ಮೆರವಣಿಗೆಯಲ್ಲಿ ವಸತಿ ಶಾಲೆಗೆ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಸುರೇಶ್ ಶೆಟ್ಟಿ, ಆನಂದ ಮಧ್ವ, ಮಾಜಿ ಅಧ್ಯಕ್ಷ ಮಾಣಿಕ್ಯರಾಜ್ ಜೈನ್, ವಗ್ಗ ಸ.ಪ್ರೌ. ಶಾಲಾ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್, ಪ್ರಮುಖರಾದ ಧನಂಜಯ ಹೆಗ್ಡೆ, ರಾಜ್‍ಪ್ರಸಾದ್ ಜೈನ್, ದೈಹಿಕ ಶಿಕ್ಷಕ ಜಯರಾಮ, ಮಂಜುನಾಥ ದಾಸ್, ವಸತಿ ಶಾಲಾ ಪ್ರಾಂಶುಪಾಲರು, ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *