ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹಲಸುಲಿಗೆ ಮಾಗಡಿ ಗ್ರಾಮದಲ್ಲಿ ಮನೆಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸೌಮ್ಯ(೨೨)ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪಿ ಮನು ಎಂಬಾತನನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಇಂದು ರಜಾದಿನವಾದ್ದರಿಂದ ಸೌಮ್ಯ ತಾಯಿಯೊಂದಿಗೆ ಮನೆಯಲ್ಲಿ ಟಿವಿ ನೋಡುತ್ತಿದ್ದಳು.ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮನು, ತಾಯಿ ಮಗಳತ್ತ ಖಾರದ ಪುಡಿ ಎರಚಿ ತಾಯಿ ಎದುರೇ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ, ಸೌಮ್ಯ ಮತ್ತು ಮನು ಸಕಲೇಶಪುರದ ಅಬಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ಸೌಮ್ಯ ಕಂಪ್ಯೂಟರ್ ಆಪರೇಟರ್ ಆಗಿದ್ರೆ, ಮನು ಡ್ರೈವರ್ ಆಗಿದ್ದ. ಇಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತತ್ತು. ಆದರೆ ಮನುಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮನುವಿನಿಂದ ಅಂತರ ಕಾಯ್ದುಕೊಂಡ ಸೌಮ್ಯ, ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನಟರಾಜ ಎಂಬುವವನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದಳು. ಸೌಮ್ಯ ನಟರಾಜ್ ನಡುವೆ ನಿಶ್ಚಿತಾರ್ಥವೂ ನಡೆದಿತ್ತು. ಈ ವಿಷಯ ತಿಳಿದು ಅಕ್ಷರಶಃ ಖುದ್ದುಹೋಗಿದ್ದ ಮನು, ಅನೇಕ ಸಲ ಸೌಮ್ಯ ಜೊತೆ ಜಗಳವಾಡಿದ್ದ. ಇದೇ ಕಾರಣಕ್ಕೆ ಸೌಮ್ಯಳ ಪೋಷಕರು ಕೆಲಸ ಬಿಡಿಸಿದ್ದರು. ಆದರೂ ಹುಚ್ಚನಂತಾಗಿದ್ದ ಮನು ಇಂದು ಮನೆಗೆ ನುಗ್ಗಿ ಸೌಮ್ಯಳನ್ನು ಕೊಚ್ಚಿ ಕೊಲೆಗೈದಿದ್ದಾನೆ.
