ವಿಟ್ಲ: ಕಾಶಿಮಠದ ಶ್ರೀಕಾಶಿ ಯುವಕ ಮಂಡಲದ ಸಭಾ ಭವನದಲ್ಲಿ ಶ್ರೀಕಾಶಿ ಮಹಿಳಾ ಮಂಡಲದ ಉದ್ಘಾಟನೆ ನಡೆಯಿತು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಸರಸ್ವತಿ ಕುಮಾರಿ ಉದ್ಘಾಟಿಸಿದರು.
ಶ್ರೀಕಾಶಿ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೊಪ್ಪಳ, ಅಧ್ಯಕ್ಷ ಧನಂಜಯ ಕಾಶಿಮಠ, ಮಹಿಳಾ ಮಂಡಲದ ಅಧ್ಯಕ್ಷೆ ಮೀರಾ ಭಟ್, ಉಪಾಧ್ಯಕ್ಷೆ ವನಿತಾ ಚಂದ್ರಹಾಸ ಸುವರ್ಣ, ಕಾರ್ಯದರ್ಶಿ ಪ್ರೇಮಾ ಹೆಗಡೆ, ಕೋಶಾಧಿಕಾರಿ ಸವಿತಾ ಯಶೋಧರ, ಜತೆಕಾರ್ಯದರ್ಶಿ ಸೀತಾ ಶೆಟ್ಟಿ, ವಸಂತಿ ಕೇಶವ ಕೊಪ್ಪಳ, ವನಿತಾ ವಿಶ್ವನಾಥ, ಶ್ರೀಕಾಶಿ ಯುವಕ ಮಂಡಲದ ಕೇಶವ ವಿ ಕೆ, ಮನೋಜ್ ಕೆ, ತಾರಾನಾಥ ಕಬ್ಬಿನಹೆತ್ಲು, ಲಕ್ಷ್ಮಣ ಆರ್ ಎಸ್, ಯಶೋಧರ ಕೆ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
