ಸುದ್ದಿ9ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಇಬ್ಬರು ಮಕ್ಕಳನ್ನು ದೆಹಲಿಗೆ ಹಠಾತ್ತನೆ ಕರೆಸಿಕೊಂಡಿದ್ದು ಏಕೆ ಎಂಬುದೇ ಈಗ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯ. ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ತೀವ್ರ ಯತ್ನ ನಡೆಸುತ್ತಿರುವುದರ ಸುಳಿವು ಅರಿತ ಗೌಡರು, ಆ ಬಗ್ಗೆ ಚರ್ಚಿಸಲು ಇಬ್ಬರೂ ಮಕ್ಕಳನ್ನು ದೆಹಲಿಗೆ ಕರೆಸಿಕೊಂಡಿದ್ದರು. ಇದನ್ನು ಗೌಡರ ಆಪ್ತರು ಖಚಿತಪಡಿಸಿದ್ದಾರೆ. ಎಚ್ಡಿಕೆ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂಬ ಬಗ್ಗೆ ಸುದ್ದಿ ಹರಡಿದ್ದ ಹಿನ್ನೆಲೆಯಲ್ಲಿ ದೇವೇಗೌಡರು, ತಮಗೆ ಆತ್ಪರಾಗಿರುವ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲ್ ಅವರೊಡನೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪುತ್ರನನ್ನು ಕಾಂಗ್ರೆಸ್‌ಗೆ ಸೆಳೆಯುವ ಯತ್ನ ನಡೆಯುತ್ತಿದೆ ಎಂಬುದು ಖಚಿತವಾಗಿದೆ. ಎಚ್ಚೆತ್ತ ಗೌಡರು ಇಬ್ಬರೂ ಮಕ್ಕಳನ್ನು ಕೂಡಲೇ ಕರೆಸಿಕೊಂಡು ಮಾತನಾಡಿದ್ದಾರೆ ಎಂಬುದನ್ನು ಹಾಸನದಲ್ಲಿ ಇರುವ ಗೌಡರ ಆಪ್ತ ವಲಯ ಖಚಿತಪಡಿಸಿದೆ. ಕಾಂಗ್ರೆಸ್ ಸೇರುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ರಾಜಕೀಯ ನಿಂತ ನೀರಲ್ಲ, ನಾನು ಸಮಾಜವಾದಿ ಜನತಾ ಪಕ್ಷ ಕಟ್ಟಿದ್ದಾಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡೇ ಸ್ಥಾನಗಳನ್ನು ಗೆದ್ದಿದ್ದೆವು. ನಂತರದಲ್ಲಿ ಪಿಎಂ, ಸಿಎಂ ಆಗಲಿಲ್ವೇ, ಒಂದು ವೇಲೆ ಕುಮಾರಸ್ವಾಮಿ ಕಾಂಗ್ರೆಸ್

By suddi9

Leave a Reply

Your email address will not be published. Required fields are marked *