ಕೈಕಂಬ: ಶ್ರೀ ಹನುಮ ಬಾಲ ಸಂರಕ್ಷಣಾ ಕೇಂದ್ರ ಶ್ರೀ ಗುರು ರಾಮಾಂಜನೇಯ ವಜ್ರದೇಹಿ ಮಠ ಟ್ರಸ್ಟ್ (ರಿ) ಗುರುಪುರ, ಇಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಮೌಲ್ಯಗಳನ್ನು ವೃದ್ಧಿಸುದಕ್ಕಾಗಿ ‘ವ್ಯಕ್ತಿತ್ವ ವಿಕಸನ ಶಿಬಿರವು ಭಾನುವಾರ ಜರುಗಿತು. ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ದೀಪಾವಳಿ ಹಬ್ಬದ ಆಚರಣೆ, ಪೌರಾಣಿಕ ಹಿನ್ನೆಲೆ ಹಿಂದು ಧರ್ಮದ ಸಂಸ್ಕೃತಿಯ ಬಗ್ಗೆ ಮಾತನಾಡಿದ ಸ್ವಾಮೀಜಿಯವರು ನಾವು ಹಮ್ಮಿಕೊಂಡಿರುವ ವ್ಯಕ್ತಿತ್ವ ವಿಕಸನ ಶಿಬಿರವು ಯಶಸ್ವಿಯಾಗಿ ನಮ್ಮ ಮಕ್ಕಳ ಬಾಳನ್ನು ಬೆಳಗಿಸಲಿ ಎಂದರು. ಈ ಕಾರ್ಯಕ್ರಮವನ್ನು ಆಯೋಜಿಸಿದ ಕಟೀಲು ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಿಮಗೆಲ್ಲ ಭ್ರಾಮರಿ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದರು.
ಕಟೀಲು ಕಾಲೇಜಿನ ಕಲಾ ವಿಭಾಗದ 2009-10ನೇ ಸಾಲಿನ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ನಮ್ಮಿಂದ ಕಿಂಚಿತ್ ಸಮಾಜಕ್ಕೆ ಸದುಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ವೇದಿಕೆಯಲ್ಲಿ ವಜ್ರದೇಹಿ ಮಠದ ಸಂಚಾಲಕರಾದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಕ್ಷೇತ್ರದ ತಂತ್ರಿಯವರಾದ ಅರುಣ್ ಭಟ್ ಖಂಡಿಗೆ ಹಾಗೂ ಕಟೀಲು ಕಾಲೇಜಿನ ಹಳೆ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಸುಪ್ರೀತ ಸೂರಿಂಜೆ ಯವರು ಉಪಸ್ಥಿತರಿದ್ದರು.
ಪ್ರತಿ ಮಕ್ಕಳಿಗೆ ಹಣತೆಯನ್ನು ನೀಡಿ ತಾವು ಹಚ್ಚಿಸಿಕೊಂಡ ದೀಪವನ್ನು ಇನ್ನೊಬ್ಬ ಸಹಪಾಠಿಗೆ ಹಚ್ಚಿಸಿಕೊಡುವ ಮೂಲಕ ದೀಪಾವಳಿ ಹಬ್ಬ ಹಾಗೂ ದೀಪಗಳ ಮಹತ್ವವನ್ನು ಸುಪ್ರೀತ ಸೂರಿಂಜೆಯವರು ನೀಡಿದರು.
ಧನ್ ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮಕ್ಕಳಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ನಂತರ ಸುಪ್ರೀತ ಸೂರಿಂಜೆ ಇವರಿಂದ ‘ಪರೀಕ್ಷೆ ಸಿದ್ಧತೆ ಹೇಗೆ? ಓದಲು ಸೂಕ್ತ ಸಮಯ ಯಾವುದು? ಪರೀಕ್ಷೆಯನ್ನು ಹೇಗೆ ಎದುರಿಸುವುದು ಇತ್ಯಾದಿಗಳ ಕುರಿತು ಮಕ್ಕಳಿಗೆ ಉಪನ್ಯಾಸವನ್ನು ನೀಡಿದರು. ಇದರ ನಡುವೆ ಚಿಕ್ಕ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಪರೀಕ್ಷಾ ಸಮಯದಲ್ಲಿನ ಮಾನಸಿಕ ಒತ್ತಡ ನಿವಾರಣೆ ಹೇಗೆ? ಆತ್ಮವಿಶ್ವಾಸ ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಪೃಥ್ವಿರಾಜ್ ಉಪನ್ಯಾಸ ನೀಡಿದರು. ಆರೋಗ್ಯಕರ ಜೀವನ ಶೈಲಿಯ ಕುರಿತು ಪೂರ್ಣಿಮಾ ನಾಯ್ಕ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಕೆ.ಆರ್.ಶೆಟ್ಟಿ ಮಾತನಾಡಿ ಇನ್ನೂ ಮುಂದೆಯೂ ನಿಮ್ಮ ತಂಡದಿಂದ ಅನೇಕ ಸಮಾಜ ಸೇವೆಗಳು ನಡೆಯಲಿ ಉತ್ತಮ ಕೆಲಸ ಎಂದು ಹುರಿದುಂಬಿಸಿ ಶ್ಲಾಘಿಸಿದರು.
ನಿಮ್ಮಿಂದ ಇಂತಹದೇ ಕಾರ್ಯಗಾರ ನಮ್ಮ ಮಕ್ಕಳಿಗೆ ನಡೆಯಲಿ ಹಿಂದು ಧರ್ಮಕ್ಕೆ ಇಂತಹ ಯುವ ಶಕ್ತಿಯ ಅಗತ್ಯವಿದೆ ಎಂದ ಅವರು ಇದಕ್ಕೆ ಪ್ರೇರಣೆಯಾದ ಅಮೃತ ಸಂಜೀವಿನಿಯನ್ನು ಹಾಡಿಕೊಂಡಾಡಿದರು. ಇವರಿಗೆ ಸುಜಿತ್ ಹಾಗೂ ಕಿರಣ್ ಶೆಟ್ಟಿಗಾರ್ ಫಲಪುಷ್ಪದೊಂದಿಗೆ ಶಾಲು ಹೊದಿಸಿ ಗೌರವಿಸಿದರು.
ನಮ್ಮ ಕಾರ್ಯಗಾರವು ಯಶಸ್ವಿಯಾದುದರ ಸಂಕೇತವಾಗಿ ಮಕ್ಕಳು ತಮ್ಮ ಅನಿಸಿಕೆಗಳನ್ನು ಹೇಳಿ ನಮಗೆ ಮತ್ತಷ್ಟು ಸ್ಫೂರ್ತಿ ಹಾಗೂ ಉತ್ಸಾಹ ಮೂಡಿಸಿದರು.

ನಮ್ಮ ತಂಡದ ಪ್ರತಿನಿಧಿಯಾಗಿ ವೇದಿಕೆಯನ್ನು ಅಲಂಕರಿಸಿದ್ದ ಸುಪ್ರೀತ ಸೂರಿಂಜೆಯವರು ನಮ್ಮ ತಂಡ ಈ ಕಾರ್ಯಗಾರವು ಹೇಗೆ ಯಶಸ್ವಿಯಾಯಿತು.ಇದರ ಹಿಂದಿನ ರೂವಾರಿಗಳು ಯಾರು ಎಂಬುದನ್ನು ಉಲ್ಲೇಖಿಸಿದರು.ಕೇವಲ ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮುಖಾಂತರ ಗೆಳೆಯ ಗೆಳತಿಯರನ್ನು ಸಂಪರ್ಕಿಸಿ ಇದರ ಬಗ್ಗೆ ಪ್ರಸ್ತಾಪಿಸಿದಾಗ ಮೊದಲು ದೊರಕಿದ ನಿರಸ ಪ್ರತಿಕ್ರಿಯೆ ತದನಂತರದ ಹೊರದೇಶದಲ್ಲಿರುವ ಮಿತ್ರರು ಹಾಗೂ ಉಳಿದ ಗೆಳೆಯ-ಗೆಳತಿಯರ ಉತ್ತಮ ಬೆಂಬಲ ನಮಗೆ ಪ್ರೇರಣೆಯಾಯಿತು ಹಾಗೆಯೇ ಇಲ್ಲಿನ ಮಕ್ಕಳು ನಮ್ಮೊಂದಿಗೆ ಉತ್ತಮವಾಗಿ ಸ್ಪಂದಿಸಿದರು ಎಂದರು.

ನಮ್ಮ ತಂಡಕ್ಕೆ ಯಾವುದೇ ನಾಮಾಂಕಿತವನ್ನು ನೀಡಿರಲಿಲ್ಲ ಹಾಗಾಗಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಮ್ಮ ತಂಡವು “ಅಮೃತವರ್ಷಿನಿ” ಎಂದು ನಾಮಕರಣಗೊಂಡಿತು.
ನಮ್ಮ ತಂಡದಲ್ಲಿ ಒಬ್ಬ ಸದಸ್ಯರಾದ ಪೃಥ್ವಿರಾಜ್ ಇವರನ್ನು ವಜ್ರದೇಹಿ ಮಠದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಅಶೋಕ್ ಸ್ವಾಮೀಜಿಯವ ರನ್ನುತುಳಸಿಮಾಲೆ ಹಾಗೂ ಫಲಪುಷ್ಪ ನೀಡಿ ಗೌರವಿಸಿದರು

ಕಾರ್ಯಕ್ರಮವನ್ನು ಧನ್ ರಾಜ್ ನಿರೂಪಿಸಿದರೆ ಸುಪ್ರೀತ ಸೂರಿಂಜೆಯವರು ವಂದಿಸಿದರು. ಆಶ್ರಮದ ಮಕ್ಕಳಿಗೆ ದೀಪಾವಳಿಯ ಪ್ರಯುಕ್ತ ಟಿ-ಶರ್ಟ್ ಹಾಗೂ ಸಿಹಿತಿಂಡಿ ಹಾಗೂ 100kg ಅಕ್ಕಿಯನ್ನು ಆಶ್ರಮಕ್ಕೆ ನೀಡಿದೆವು.
ನಮ್ಮ ತಂಡದ ಎರಡನೇ ಹೆಜ್ಜೆ ಇದಾಗಿದೆ. ಈ ಹಿಂದೆ ಕಾವ್ಯಳ ಮನೆಗೆ ಭೇಟಿ ನೀಡಿ ಸ್ವಾಂತನ ನಿಧಿಯನ್ನು ನಮ್ಮ ತಂಡ ನೀಡಿರುತ್ತದೆ. ಶ್ರೀ ವಜ್ರದೇಹಿ ಬಳಗ ಗುರುಪುರ ಹಾಗೂ ರಂಗ್ ದ ಕಲಾವಿದೆರ್ ಗುರುಪುರ ಇವರ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿತು.


