ಗುರುಪುರ : ಗುರುಪುರ ಬಂಟರ ಮಾತೃ ಸಂಘ ಇದರ ಯುವ ವಿಭಾಗದ ಆಶ್ರಯದಲ್ಲಿ ನವಂಬರ್ 5ರಂದು ಗಂಜಿಮಠದ ರಾಜ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಬೆಳಿಗ್ಗೆ 9.30ರಿಂದ `ಬಂಟರ ಕ್ರೀಡಾಕೂಟ’ ಜರುಗಲಿದೆ.
ಕ್ರೀಡಾಕೂಟವನ್ನು ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾೈಕ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆಯಲ್ಲಿ ಈ ಕ್ರೀಡಾ ಕೂಟ ಜರುಗಲಿದೆ. ಉದ್ಯಮಿ ಯತಿರಾಜ್ ಶೆಟ್ಟಿ ನಿಟ್ಟೆಗುತ್ತು ಮತ್ತು ಶ್ರೀಮತಿ ಯತಿರಾಜ್ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಿಥುನ್ ರೈ, ಜಗದೀಶ ಶೇಣವ, ಡಾ. ಪ್ರೊ. ಜಸ್ವಂತ್ ಸಾಮ್ಯುವೆಲ್ಸ್, ದಯಾನಂದ ಮಾಡ, ಪ್ರೇಮನಾಥ ಶೆಟ್ಟಿ, ಶಶಿಧರ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ, ಸುನಿತಾ ಶೆಟ್ಟಿ, ಪ್ರವೀಣಚಂದ್ರ ಆಳ್ವ, ಗೋಪಾಲಕೃಷ್ಣ ಶೆಟ್ಟಿ, ಸುರೇಶ್ ರೈ, ಶಶಿರಾಜ್ ಶೆಟ್ಟಿ ಕೊಳಂಬೆ, ವಿಕಾಸ್ ಶೆಟ್ಟಿ, ಡಾ. ದೇವದಾಸ ರೈ, ಸಬಿತಾ ಶೆಟ್ಟಿ, ಉಲ್ಲಾಸ್ ಶೆಟ್ಟಿ, ಡಾ. ವೈ ಭರತ್ ಶೆಟ್ಟಿ, ಗಿರೀಶ್ ಆಳ್ವ, ಪ್ರಸಾದ್ ಮಲ್ಲಿ, ಮೇಘನಾಥ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಕೇಶವ ಮಾರ್ಲ, ಜಗನ್ನಾಥ ಬಾಳ, ಆನಂದ ಶೆಟ್ಟಿ, ಜಯಶೀಲ ಅಡ್ಯಂತಾಯ, ಜನಾರ್ದನ ಶೆಟ್ಟಿ, ಪ್ರವೀಣ್ ಶೆಟ್ಟಿ, ಹೇಮಂತ್ ಶೆಟ್ಟಿ, ಉಮೇಶ್ ಶೆಟ್ಟಿ, ರವೀಂದ್ರ ರೈ, ಕೃಷ್ಣರಾಜ ಸುಲಾಯ, ಸುಲತಾ ಜೆ ಶೆಟ್ಟಿ ಮತ್ತು ಸುಧೀರ್ ಭಂಡಾರಿ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟದ
ಸ್ಪರ್ಧೆಯ ವಿವರ :
50 ಮೀ.ಓಟ, ಚೆಂಡು ಪಾಸ್(ಬಾಲಕ, ಬಾಲಕಿಯರು-ಎಲ್‍ಕೆಜಿ-ಒಂದನೇವರೆಗೆ), 50 ಮೀ. ಓಟ, ಕಪ್ಪೆ ಜಿಗಿತ(ಬಾಲಕ, ಬಾಲಕಿಯರು-2ನೇ ತರಗತಿಯಿಂದ 4), ಬಟಾಟೆ ಓಟ, 100 ಮೀ. ಓಟ (ಬಾಲಕ, ಬಾಲಕಿಯರು-5ನೇ ತರಗತಿಯಿಂದ 7), 100 ಮೀ. ಓಟ, ಮುಟ್ಟಲೆ ಓಟ(ಹುಡುಗ, ಹುಡುಗಿಯರು-8ನೇ ತರಗತಿಯಿಂದ 10), 200 ಮೀ. ಓಟ, ಗೋಣಿಚೀಲ ಓಟ(ಹುಡುಗ, ಹುಡುಗಿಯರು-ಪಿಯುಸಿ 1,2 ವರ್ಷ), 200 ಮೀ. ಓಟ, ಗೋಣಿಚೀಲ ಓಟ(ಹುಡುಗ, ಹುಡುಗಿಯರು-ಪದವಿ ವಿದ್ಯಾರ್ಥಿಗಳು), 100 ಮೀ. ಓಟ, ಗುಂಡೆಸೆತ(25 ವರ್ಷ ಪುರುಷರು ಹಾಗೂ ಮಹಿಳೆಯರಿಗೆ), 100 ಮೀ. ಓಟ ಗುಂಡೆಸೆತ(35 ವರ್ಷಕ್ಕಿಂತ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ), ಸಮೂಹ ಸ್ಪರ್ಧೆಗಳು : ಪುರುಷರ ವಿಭಾಗ : ವಾಲಿಬಾಲ್, ಪೆನಾಲ್ಟಿ ಶೂಟೌಟ್, ಲಗೋರಿ, ಹಗ್ಗಜಗ್ಗಾಟ, 4*100 ಮೀ. ರಿಲೇ ಓಟ, ಕಬ್ಬಡ್ಡಿ(30 ವರ್ಷದೊಳಗಿನವರಿಗೆ), ಮಹಿಳಾ ವಿಭಾಗ : ತ್ರೋ ಬಾಲ್, ಟೆನ್ನಿಸ್ ಬಾಲ್ ಶೂಟೌಟ್, ಲಗೋರಿ, ಹಗ್ಗಜಗ್ಗಾಟ, 4*100 ಮೀ. ರಿಲೇ ಓಟ.
ಸಂಜೆ 4.30ಕ್ಕೆ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಬಹುಮಾನ ವಿತರಣೆ ಮಾಡಲಿದ್ದಾರೆ. ವೇದಿಕೆಯಲ್ಲಿ ಮಂಜುನಾಥ ಭಂಡಾರಿ ಶೆಡ್ಡೆ(ಧಾರ್ಮಿಕ ಮುಖಂಡ), ರವಿರಾಜ್ ಶೆಟ್ಟಿ ನಿಟ್ಟೆಗುತ್ತು(ಅಧ್ಯಕ್ಷ, ಮಂಗಳೂರು ತಾಲೂಕು ಬಂಟರ ಸಂಘ), ರವೀಂದ್ರನಾಥ ಮಾರ್ಲ ಬೆಂಗಳೂರು (ಉದ್ಯಮಿ), ಸುಂದರ ಶೆಟ್ಟಿ ಮಂಗಳೂರು, ಸೋಮಶೇಖರ್ ಶೆಟ್ಟಿ ಕೆಂಚನೂರು, ವಸಂತ ಶೆಟ್ಟಿ ಮಂಗಳೂರು, ರವೀಂದ್ರನಾಥ ಶೆಟ್ಟಿ ಮಂಗಳೂರು, ಹೇಮನಾಥ ಶೆಟ್ಟಿ ಮಂಗಳೂರು, ಜಯರಾಮ ಸಾಂತ ಮಂಗಳೂರು, ಉಮೇಶ್ ರೈ ಮಂಗಳೂರು, ಸತೀಶ್ ಶೆಟ್ಟಿ ವಾಮಂಜೂರು ಮತ್ತು ಡಾ. ರವಿರಾಜ್ ಶೆಟ್ಟಿ ಕಾರಮೊಗರುಗುತ್ತು ಉಪಸ್ಥಿತಲಿರುವರು.

By suddi9

Leave a Reply

Your email address will not be published. Required fields are marked *