ಗುರುಪುರ : ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಉತ್ತರ ಭಾರತೀಯ ಮೂಲದ ಸುಮಾರು 20 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಅ. 22ರಂದು ಇಲ್ಲಿನ ಫಲ್ಗುಣಿ ನದಿ ತಟದ ಕಾರಮೊಗರುಗುತ್ತುವಿನಲ್ಲಿರುವ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿತು.23-0001

23-000

ತಂಡದ ಜೊತೆಗೆ ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಪ್ರೊಫೆಸರ್ ರವಿರಾಜ ಶೆಟ್ಟಿ ಇದ್ದರು. ಈ ಸಂದರ್ಭದಲ್ಲಿ ನದಿ ತೀರದಲ್ಲಿರುವ ಈ ದೇವಸ್ಥಾನ ಬಗ್ಗೆ ದೇವಸ್ಥಾನದ ಪ್ರಧಾನ ಸೇವಕ ಪುರುಷೋತ್ತಮ ಪೂಜಾರಿ ಹಾಗೂ ಸಂತೋಷ್(ಸಂತು) ಮಾಹಿತಿ ನೀಡಿದರು. ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಹಲವು ಮಂದಿ ಪಾಲ್ಗೊಂಡರು. “ಇದೊಂದು ಪ್ರಕೃತಿ ರಮಣೀಯ ದೃಶ್ಯಗಳ ಮಧ್ಯೆ ಇರುವ ಸುಂದರ ದೇವಾಲಯ” ಎಂದು ಇಂಜಿನಿಯರ್ ವಿದ್ಯಾರ್ಥಿನಿಯೊಬ್ಬರು ಉದ್ಗರಿಸಿದರು.

By suddi9

Leave a Reply

Your email address will not be published. Required fields are marked *