ರಸ್ತೆ ಬದಿಗಳಲ್ಲಿ ಒಂದೊಂದು ಮುರುಕು ರಿಕ್ಷಾಗಳು , ಅದರ ಜೊತೆಯಲ್ಲಿ ಒಂದು ಗ್ಯಾಸ್ ಸ್ಟವ್ ಮತ್ತು ನಾಲ್ಕಾರು ಕುರ್ಚಿಗಳು ,.. ರಿಕ್ಷಾದ ಮುಂದೆ ಕಲರ್ ಕಲರ್ ಸಾಸ್‍ಗಳು ಇತ್ಯಾದಿಗಳು . ಇವೆಲ್ಲಾ ನೊಡಿದ್ಮೇಲೂ ನಮ್ಮ ಮನಸ್ಸು ಸುಮ್ನಿರತ್ತಾ ಹೇಳಿ..??ಖಂಡಿತಾ ಇಲ್ಲ ನಾವೂ ಆ ರಿಕ್ಷಾದ ಕಡೆಗೇ ನಿಧಾನವಾಗಿ ಹೆಜ್ಜೆ ಹಾಕ್ತೀವಿ ಬಾಯಿ ಚಪ್ಪರಿಸುತ್ತಾ ಫಾಸ್ಟ್ ಫುಡ್ ತಿಂತೀವಿ ಅಷ್ಟೇ… ಆದ್ರೆ ನಾವ್ಯಾವತ್ತಾದ್ರೂ ಆ ಫಾಸ್ಟ್ ಫುಡ್‍ಗಳಿಗೆ ಹಾಕೋ ಕೆಮಿಕಲ್‍ಗಳ ಬಗ್ಗೆ ಗಮನ ಹರಿಸ್ತೀವಾ ? ಅದ್ರಿಂದ ಆರೋಗ್ಯದ ಮೇಲಾಗೋ ಪರಿಣಾಮಗಳ ಬಗ್ಗೆ ಗಮನ ಹರಿಸ್ತೀವಾ ? ಖಂಡಿತಾ ಇಲ್ಲ ಆದ್ರೆ ನಾವಿವತ್ತು ಅಂತಹಾ ಫಾಸ್ಟ್ ಫುಡ್‍ಗಳಿಂದ ಆರೋಗ್ಯದ ಮೇಲಾಗೋ ದುಷ್ಪರಿಣಾಮಗಳ ಬಗ್ಗೆ ತಿಳಿಸ್ಕೊಡ್ತೀವಿ ನೋಡಿ.
ಸಾಮಾನ್ಯವಾಗಿ ಅಜಿನಮೋಟೋ ಎಂದು ಕರೆಸಿಕೊಳ್ಳುವ ಈ ರಾಸಾಯನಿಕ ಬಳಸದಿದ್ದರೆ ನಿಮ್ಮ ಚೈನೀಸ್ ಫಾಸ್ಟ್ ಫುಡ್‍ಗಳಿಗೆ ಆ ಟೇಸ್ಟ್ ಬರೋದೇ ಇಲ್ಲ ನಿಮ್ಮ ನಾಲಗೆಗೆ ಹಿಡಿಸೋ ಟೇಸ್ಟ್ ಬರಬೇಕಾದ್ರೆ ಫಾಸ್ಟ್‍ಫುಡ್‍ಗಳಲ್ಲಿ ಅಜಿನಮೋಟೋ ಇರಲೇ ಬೇಕು ಇಲ್ಲಾಂದ್ರೆ ನೀವು ಫಾಸ್ಟ್ ಫುಡ್ ತಿನ್ನೋದೇ ಇಲ್ಲ.
ವೈಜ್ಞಾನಿಕವಾಗಿ ಮೋನೋ ಸೋಡಿಯಂ ಗ್ಲುಕಾಮೇಟ್ ಎಂದು ಕರೆಯಲ್ಪಡುವ ಅಜಿನಮೋಟೋವನ್ನು 1908ರಲ್ಲಿ ಜಪಾನಿ ಸಂಶೋಧಕ ಕಿಕುನೆ ಇಕೆಡಾ, ಎಂಬ ಸಂಶೋಧಕ ಕಂಡುಹಿಡಿದ , ಕಡಲ ಒಳಗೆ ದೊರೆಯುವ ಆಂಕ್ಸೆಂಟ್ ಎಂಬ ಸಸ್ಯದ ಬಳ್ಳಿಗಳ ರಸದಿಂದ ಆವಿಷ್ಕರಿಸಲಾದ ಟೇಸ್ಟ್ ಮೇಕರ್‍ಗೆ ಅಜಿನಮೋಟೋ ಎಂದು ಹೆಸರಿಸಿದ . ಇದರಲ್ಲಿ ಶೇ 78 ಗ್ಲುಟಾಮಿಕ್ ಆಸಿಡ್ ಮುಕ್ತ ರೂಪದಲ್ಲಿದೆ. ಶೇ. 21% ಸೋಡಿಯಂ ಮತ್ತು ಶೇ 1% ಕಲ್ಮಷಗಳಿವೆ. ನಮ್ಮೆಲ್ಲೆರ ಬಾಯಲ್ಲಿ ಎಂಎಸ್‍ಜಿ ಎಂದು ಕರೆಯಲ್ಪಟುವ ಈ ರಾಸಾಯನಿಕ ರುಚಿ ಹೆಚ್ಚಿಸುವ ಜೊತೆಯಲ್ಲಿ ನಿಮ್ಮ ದೇಹದ ಒಂದೊಂದೇ ಅಂಗಗಳನ್ನು ನುಂಗಿ ಅಪೋಷನ ತೆಗೆದುಕೊಂಡು ಬಿಡುತ್ತದೆ ಅಷ್ಟೇ….
ಮೋನೋ ಸೋಡಿಯಂ ಗ್ಲುಟಾಮೇಟ್ ಹೆಸರಿನಲ್ಲೇ ಸೂಚಿಸುವಂತೆ ಒಂದು ಎಕ್ಸೆಟೋ ಟಾಕ್ಸಿನ್ ಅಂದರೆ ವಿಷಕಾರಿ ಪದಾರ್ಥ. ವಿಶ್ವದ ಪ್ರಖ್ಯಾತ ನರತಜ್ಞರಾದ ಡಾ. ರಸ್ಸೆಲ್ ಬೆಲ್ಲಾಕ್ ಅವರ ಪ್ರಕಾರ ಎಂಎಸ್‍ಜಿ ಮೊದಲು ಎಲ್ಲಾ ನರಗಳ ಶಕ್ತಿಗಳನ್ನು ಕುಗ್ಗಿಸುತ್ತದೆ. ನಂತರ ಶರೀರದಲ್ಲಿ ನಾನಾ ರೀತಿಯ ಆರೋಗ್ಯದ ಏರುಪೇರಾಗಿ ಅನಾರೋಗ್ಯಕರ ಅವಕಾಶಗಳ್ನು ಮಾಡುತ್ತವೆ. ಅತಿಯಾದ ಫಾಸ್ಟ್‍ಫುಡ್ ಬಳಸುವ ಅಭ್ಯಾಸವುಳ್ಳವರು ಆದಷ್ಟು ಕಡಿಮೆ ಮಾಡುವುದು ಒಳಿತು.
ಅಜಿನಮೋಟೋ ಅಥವಾ ಮೋನೋಸೋಟಿಯಂ ಗ್ಲುಟಾಮೇಟ್ ದೇಹದಲ್ಲಿ ಅತಿಯಾಗಿದ್ದರೆ,ಹಲವಾರು ಅನಾರೋಗ್ಯಕ್ಕೆ ಕಾರಣವಾಗಬಹುದು. ಅವುಗಳಲ್ಲಿ
* 1. ಅತಿಯಾದ ಕೊಬ್ಬು ಶೇಕರಣೆ : ಎಂಎಸ್‍ಎಂ ನ ಅತಿಯಾದ ಬಳಕೆಯಿಂದಾಗಿ ದೇಹದಲ್ಲಿ ಅತಿಯಾದ ಕೊಬ್ಬು ಶೇಖರಣೆಗೊಳ್ಳುತ್ತದೆ, ಇದರಿಂದ ದೇಹ ದಪ್ಪಗಾಗುವುದು ,ಎಷ್ಟೇ ವ್ಯಾಯಾಮ ಮಾಡಿದರೂ ಕೊಬ್ಬು ಕರಗದೇ ಸ್ಥೂಲಕಾಯದಂತಾಗಿ ದೇಹದ ಸ್ವಾಸ್ಥ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಅನಾರೋಗ್ಯಕರ ದೇಹದಿಂದ ಮಾನಸಿಕ ನೆಮ್ಮದಿಯು ಸಂಪೂರ್ಣವಾಗಿ ಹದಗೆಡುತ್ತವೆ.
* 2. ಕಣ್ಣು ನೋವು : ಫಾಸ್ಟ್ ಫುಡ್‍ಗಳ ಅಧಿಕ ಬಳಕೆಯಿಂದಾಗಿ ಕಣ್ಣುನೋವು ಸಹಾ ಸಂಭವಿಸಬಹುದು. ಅನಾರೋಗ್ಯಕರ ಆಹಾರಶೈಲಿಗಳಿಂದಾಗಿ ಕಣ್ಣುಗಳಿಗೆ ದೊರಕಬೇಕಾದ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ದೊರಕದೇ ಕಣ್ಣುಗಳ ಆರೋಗ್ಯ ಹದಗೆಡಬಹುದು.ಮತ್ತು ದೃಷ್ಠಿ ದೋಷದಂತಹಾ ಖಾಯಿಲೆಗಳು ಪ್ರಾರಂಭವಾಗಬಹುದು.
*3. ತಲೆನೋವು : ಅನೇಕ ರೀತಿಯ ತಲೆನೋವಿಗೂ ಅಜಿನಮೋಟೋ ಕಾರಣವಾಗುತ್ತಿದೆ. ದೇಹದ ಅಧಿಕ ಅನಾರೋಗ್ಯಕರ ಆಹಾರಗಳು ಶೇಖರಣೆಗೊಂಡು , ಇತ್ತ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರಕದೇ ಅತ್ತ ಸ್ವಾಸ್ಥಪೂರ್ಣ ಆರೋಗ್ಯವೂ ದೊರಕದೇ ,ಉತ್ತಮ ಆರೋಗ್ಯಶೈಲಿಗಳಿಲ್ಲದೇ ತಲೆನೋವಿನಂತಹಾ ರೋಗಕ್ಕೂ ಅಜಿನಮೋಟೋ ಕಾರಣವಾಗುತ್ತವೆ .
*4. ಮೆದುಳಿನ ಸಂಬಂಧಿ ಖಾಯಿಲೆ : ಎಂಎಸ್‍ಜಿಯಲ್ಲಿ ಇರುವ ಸೋಡಿಯಂ ಅಥವಾ ಉಪ್ಪು ಅಧಿಕ ಪ್ರಮಾಣದಲ್ಲಿದ್ದು ,ಅಧಿಕ ಉಪ್ಪು ಮೆದುಳನ್ನು ಶಕ್ತಿಹೀನವನ್ನಾಗಿಸುತ್ತದೆ. ಜೊತೆಯಲ್ಲಿ ಮೆದುಳಿನ ಸ್ವಾಸ್ಥ್ಯವನ್ನು ಕೆಡಿಸುತ್ತದೆ.
*5. ಬೆವರುವಿಕೆ : ಫಾಸ್ಟ್‍ಫುಡ್‍ಗಳ ಅಧಿಕ ಉಪಯೋಗಗಳಿಂದಾಗಿ ಸದಾ ಬೆವರುತ್ತಿರುತ್ತವೆ. ಬೆವರುವಿಕೆಯ ಪರಿಣಾಮದಿಂದಾಗಿ ದೇಹದಲ್ಲಿ ನೀರಿನ ಕೊರತೆಯಿಂದಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತವೆ.
* 6. ಗರ್ಭೀಣಿಯರಿಗೆ ಬಹಳ ಹಾನಿಕಾರಕ : ಅಜಿನಮೋಟೋದಲ್ಲಿ ಕಂಡುಬರುವ ರಾಸಾಯನಿಕ ಪದಾರ್ಥಗಳು ಗರ್ಭೀಣಿಯರಿಗೆ ಮಾತ್ರವಲ್ಲದೇ ಆಕೆಯ ಮಗುವಿನ ಸ್ವಾಸ್ಥ್ಯಕ್ಕೂ ಹಾನಿಯುಂಟಾಗಬಹುದು. ಜೊತೆಯಲ್ಲಿ ಮಗುವು ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟುವ ಸಂಭವವೇ ಹೆಚ್ಚು. ಆದ್ದರಿಂದ ಗರ್ಭೀಣಿಯರು ಆದಷ್ಟು ಫಾಸ್ಟ್‍ಫುಡ್‍ಗಳಿಂದ ದೂರವಿದ್ದರೆ ಆಕೆಗೂ ಆಕೆಯ ಸಂಸಾರಕ್ಕೂ ಒಳ್ಳೆಯದು.
*7. ಮುಖ ಊದಿಕೊಳ್ಳುವುದು : ಎಂಎಸ್‍ಎಮ್‍ನ ಅಧಿಕ ಉಪಯೋಗಗಳಿಂದಾಗಿ ಮುಖದ ಸ್ವಾಸ್ಥ್ಯದ ಕುಂದುತ್ತದೆ. ಮುಖದ ತುಂಬೆಲ್ಲಾ ನೀರು ತುಂಬಿದಂತಾಗಿ ಮುಖ ಬಿಳಿಚಿಕೊಂಡಂತಿರುತ್ತದೆ. ಕಣ್ಣುಗಳಲ್ಲಿ ಅತಿಯಾದ ಉರಿ ,ಚರ್ಮದಲ್ಲಿ ಬಿಗಿತವೂ ಕಂಡುಬರುತ್ತವೆ.
*8. ಇವಿಷ್ಟೇ ಅಲ್ಲದೇ ದೇಹದಲ್ಲಿ ಅಧಿಕ ರಕ್ತದೊತ್ತಡ , ಹೊಟ್ಟೆ ಉರಿ, ಕಿಬ್ಬೊಟ್ಟೆ ಬೇನೆ, ವಾಂತಿ ಬೇಧಿ ಮೂಳೆ ಮತ್ತು ಸ್ನಾಯುಗಳಲ್ಲಿ ನೋವು ಕಂಡುಬರುತ್ತವೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಹೆಚ್ಚಾಗುವ ಎದೆಬಡಿತದಿಂದಾಗಿ ದೇಹದ ಎಲ್ಲಾ ಅಂಗಾಂಗಗಳಿಗೂ ಹಾನಿಯಾಗುವ ಸಂಭವವೇ ಹೆಚ್ಚು.
ನಾವು ಸೇವಿಸುವ ಆಹಾರ ನಮ್ಮ ದೇಹದ ದೈಹಿಕ ಮಾನಸಿಕ ಮತ್ತು ಸಂಪೂರ್ಣ ಬೆಳವಣಿಗೆಗೆ ಪೂರಕವಾಗಿರಬೇಕು ಹೊರತು ಮಾರಕವಾಗಿರಬಾರದು, ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಎಲ್ಲವೂ ಹಿತವಾಗಿ ಮಿತವಾಗಿದ್ದರೆ ಒಳ್ಳೆಯದು. ರುಚಿಯ ಕೈಗೆ ನಾಲಗೆಯನ್ನು ಕೊಡದೆ ಆರೋಗ್ಯಪೂರ್ಣ ಜೀವನಶೈಲಿಯ ಉತ್ತಮ ಆಹಾರಗಳನ್ನು ಸೇವಿಸುವುದು ಒಳ್ಳೇಯದು . ಹಸಿ ತರಕಾರಿ , ಹಣ್ಣುಗಳು, ನೈಸರ್ಗಿಕ ಪೇಯಗಳಾದ ಕಬ್ಬಿನ ರಸ, ಎಳನೀರು ಸೇವಿಸಿ, ದೇಹಕ್ಕೆ ಬೇಕಾದಷ್ಟು ನೀರನ್ನು ಸೇವಿಸಿ ಆರೋಗ್ಯಪೂರ್ಣ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ, ವಿಷಪೂರಿತ ಆಹಾರಗಳನ್ನು ಸೇವಿಸದೇ ಆರೋಗ್ಯಕರ ಆಹಾರ ಸೇವಿಸಿ, ಆರೋಗ್ಯಪೂರ್ಣ ಸಮಾಜಕ್ಕೆ ಮುನ್ನುಡಿ ಬರೆಯೋಣ….
* ಅಕ್ಷಯ್ ಭಟ್


