ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 252 ಕೋ.ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆನುವಾರ  ಅಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಸಹಿತ ಮಂತ್ರಿವರ್ಯರನ್ನು ಬಿ.ಸಿ.ರೋಡಿನ ಕೈಕಂಬದಲ್ಲಿ ಸಚಿವ ರಮಾನಾಥ ರೈ ಅವರ ನೇತ್ರತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.80

ಅಲ್ಲಿಂದ ಮುಖ್ಯಮಂತ್ರಿಯವರ ಸಹಿತ ಎಲ್ಲ ಸಚಿವರನ್ನು ಮಿನಿ ವಿಧಾನ ಸೌಧದವರೆಗೆ ಬಿ.ಸಿ.ರೋಡಿನ ರಾಜರಸ್ತೆಯಲ್ಲಿ ಹವಾನಿಯಂತ್ರಿತ ಖಾಸಗಿ ಬಸ್ ನಲ್ಲಿಮೆರವಣಿಗೆಯಮೂಲಕಕರೆತರಲಾಯಿತು.ಗೊಂಬೆ ಕುಣಿತ,ಕೀಲುಕುದುರೆ, ಹುಲಿವೇಷ, ಕೇರಳದ ಚೆಂಡೆ,ಬ್ಯಾಂಡ್ ಮೆರವಣಿಗೆಗೆ ಮೆರಗು ನೀಡಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಾಸಕರಾದ ಜೆ.ಆರ್.ಲೋಬೋ,ಮೊಯಿದೀನ್ ಬಾವ,, ಐವಾನ್ ಡಿ ಸೋಜ,ಸಚಿವರಾದ ಡಿ.ಕೆ.ಶಿವಕುಮಾರ್,ಟಿ.ಬಿ.ಜಯಚಂದ್ರ,ಮಹಾದೇಪ್ಪ ಈಶ್ವರ ಖಂಡ್ರೆ,ಯು.ಟಿ.ಖಾದರ್,ಪಕ್ಷದ ಮುಖಂಡರು ಉಸ್ಥಿತರಿದ್ದರು.IMG-20171022-WA0021 (1)

IMG-20171022-WA0017

ಮಿನಿವಿಧಾನ ಸೌಧ,ಮೆಸ್ಕಾಂ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮುಖ್ಯಮಂತ್ರಿಯವರು ಬಂಟ್ವಾಳ ನಗರ ಸಂಚಾರ ನಡೆಸಿದರು. ಮೊದಲು ನೂತನ ಪ್ರವಾಸಿ ಮಂದಿರ,ಅಲ್ಲೇ ಪಕ್ಕದಲ್ಲಿ ನಿರ್ಮಾಣವಾದ ಟ್ರೀಪಾಕ್೯, 100 ಬೆಡ್ ಗೇರಿದ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿದರು.ನಂತರ ಅಲ್ಲೇ ಪಕ್ಕದಲ್ಲಿ ಪಂಜೆ ಮಂಗೇಶರಾಯರ ಸ್ಮಾರಕಭವನಕ್ಕೆ ಶಿಲಾನ್ಯಾಸ ನೆರೆವೇರಿಸಿದರು.ಅಲ್ಜಿಂದ ನೇರ ಜಕ್ರಿಬೆಟ್ಟುವಿನಲ್ಲಿ ಪುರಸಭಾವ್ಯಾಪ್ತಿಯ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು.ಇಲ್ಲಿಂದ ಬಿ.ಸಿ.ರೋಡಿಗೆ ಅಗಮಿಸಿದ ಮುಖ್ಯಮಂತ್ರಿಯವರು ಕೆ.ಎಸ್.ಅರ್.ಟಿ.ಸಿ.ಬಸ್ ನಿಲ್ದಾಣ ಉದ್ಘಾಟಿಸಿದರು.77

14-1-696x392

89

ಬಳಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಬಹುಗ್ರಾಮ ಯೋಜನೆಯ ಉದ್ಘಾಟನೆ ನೆರವೇರಿಸಿದರು. ಇದೇ ವೇಳೆ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದರು. *ಕಾರ್ಯಕರ್ತರ ನೂಕುನುಗ್ಗಲು,ಬಾಗಿಲು ಹುಡಿ* ಮಿನಿ ವಿಧಾನ ಸೌಧ ಬಳಿ ಮುಖ್ಯಮಂತ್ರಿಯವರ ಅಗಮನದ ವೇಳೆ ಕಾರ್ಯಕರ್ತರಿಂ ನೂಕುನುಗ್ಗಲು ಉಂಟಾದುದರಿಂದ ಬಾಗಿಲು ಜಖಂ ಗೊಂಡಿತು.ಈ ಸಂದರ್ಭ ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಕಾರ್ಯಕರ್ತರನ್ನು ಚದುರಿಸಿದರು.

By Suddi9

Leave a Reply

Your email address will not be published. Required fields are marked *