ಕೈಕಂಬ:ಹಬ್ಬಗಳ ಆಚರಣೆ ಸಾಂಪ್ರದಾಯಕವಾಗಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಪುನರಪಿಸುವ ಸಮುದಾಯಕ್ಕೆ ಪರಿಚಯಿಸುತ್ತಾ ಅವರ ನೆನಪಿನಾಳದಲ್ಲಿ ಸದಾ ಹಸಿರಾಗಿರುವಂತೆ ಮಾಡುವಲ್ಲಿ ಸುಂಕದಕಟ್ಟೆಯಲ್ಲಿ ಜರುಗುತ್ತಿರುವ ಬೋಲ್ಪುದ ಪರ್ಬ ಆಚರಣೆ ಯಶಸ್ವಿಯಾಗಿರುವುದು ಶ್ಲಾಫನೀಯವೆಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕರಾದ ಡಾ/ ಯೋಗೀಶ್ ಕೈರೋಡಿ ಹೇಳಿದರು . ಅವರು ಬಜ್ಪೆ ಸುಂಕದಕಟ್ಟೆಯಲ್ಲಿ ಇಲ್ಲಿನ ದೇವಳಯದ ಆಶ್ರಯದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇವರ ಮಾಂದಾಳತ್ವದಲ್ಲಿ ಜರಗಿದ ಬೊಲ್ಪುದ ಪರ್ಬ 2017ರ ಗೂಡುದೀಪ ಮತ್ತು ರಂಗೋಲಿ ಪ್ರದರ್ಶನದ ಕಾರ್ಯಕ್ರಮದ ಸಭಾ ವೇದಿಕೆಯಿಂದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿಶ್ವೇಷಿನಾತ್ಮಕವಾಗಿ ಮಾತುಗಳ ಮೂಲಕ ಬೊಲ್ಪುದ ಪರ್ಬ ಉಪನ್ಯಸವನ್ನ ಅವಾರವರಣ ಗೋಳಿಸಿದರು. ಯಕ್ಷಮಿತ್ರರು ಸುಂಕದಕಟ್ಟೆ ಇದರ ರುವಾರಿ ಜಗದೀಶ್ ಅಮೀನ್ ಸುಂಕದಕಟ್ಟೆ ಇವರು ಸ್ವಯಂ ಒಬ್ಬ ಗೂಡು ದೀಪ ಕಲಾವಿದನಾಗಿ ಕುದ್ರೋಳಿಯಲ್ಲಿ ಜರುಗುತ್ತಿರುವ ಗೂಡು ದೀಪ ಸ್ಪರ್ಧೆಯಿಂದ ಪ್ರಭಾವಿತರಾಗಿ ಇಲ್ಲಿ ಈ ಒಂದು ಕಾರ್ಯಕ್ರಮವನ್ನ ಕಳೆದ ಮೂರು ವರುಷಗಳಿಂದ ಹಮ್ಮಿಕೋಳುತ್ತಿರುವುದು ಶ್ವಾಘನೀಯವೆಂದು ಕದ್ರಿ ನವನೀತ ಶೆಟ್ಟಿ ಇವರು ಹೇಳಿದರು.
ಬೊಲ್ಪುದ ಪರ್ಬ ಆಚರಣೆಯಲ್ಲಿ ಗೂಡು ದೀಪ ರಂಗೋಲಿಗಳು ಸಂಸ್ಕ್ರತಿಯ ಪ್ರತೀಕವಾಗಿದ್ದು ಶ್ರೀ ಕ್ಷೇತ್ರದಲ್ಲಿ ಇದು ಮೇಳೆಸುತ್ತಿರುವುದು ಮತ್ತು ಯಕ್ಷಮಿತ್ರರ ಈ ಕಾರ್ಯಕ್ರಮ ಇಲ್ಲಿ ನಿರಂತರವಾಗಲೆಂದು ನಮ್ಮ ಕಡ್ಲ ದೂರದರ್ಶಿನ ವಾಹಿನಿಯ ನಿರ್ದೇಶಕರಾದ ಲೀಲಾಕ್ಷ ಕರ್ಕೇರ ಇವರು ಹೇಳಿದರು. ಸುರೇಶ್ ಇವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಇಂತಹ ಕಾರ್ಯಕ್ರಮಗಳು ಸಾರ್ವತ್ರಿಕವಾಗಿ ನಡೆಯಲಿ ಎಂದು ಅಶಿಸಿದರು ವೇದಿಕೆಯಲ್ಲಿ ಶೋಭಾರಾಣಿ, ವಿನೋಧರ ಪೂಜಾರಿ, ಮುರಳಿಧರ್ ಮುಂತಾದವರು ಉಪಸ್ಥಿತರಿದ್ದರು ಸಭಾ ಕಾರ್ಯಕ್ರಮದ ಪೂರ್ವದಲ್ಲಿ ತುಳಸಿಕಟ್ಟೆಯ ಎದುರುಗಡೆ ಇರಿಸಿದ ದೀಪವನ್ನು ದೇವಾಲಯದ ಪ್ರಧಾನ ಆರ್ಚಾಕರಾದ ಗೋವಿಂದ ಭಟ್ ಇವರು ಪ್ರಜ್ವಲನಗೋಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಈ ಸಂದರ್ಭದಲ್ಲಿ ದಯಾನಂದ ಪೂಜಾರಿ ಅಡ್ಕಬಾರೆ, ಶ್ರೀಧರ್ ಕುಂದರ್, ಉಮೇಶ್ ಕುಲಾಲ್, ರಮೇಶ್ ಬಾಬು, ಶೋಭಾರಾಣಿ, ರಮೇಶ್ ಇರುವೈಲು ಮುಂತಾದವರು ಹಾಜರಿದ್ದರು. ಶೋಭಾರಾಣಿ ಇವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು ಬಳಿಕ ಇಲ್ಲಿನ ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆಗಳಾದ ಪ್ರಥಮಿಕ ಪ್ರೌಢ ಪದವಿ ಪೂರ್ವ ಪದವಿ ತರಗತಿಗಳು ಕಳೆದ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಹಾಡುಗಾರಿಕೆ ಭರತನಾಟ್ಯ ಜಾನಪದ ನೃತ್ಯ ಯಕ್ಷನಾಟ್ಯ ವೈಭವಗಳ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಕಳೆದ ಮೂರು ವರುಷಗಳಿಂದ ಬೋಲ್ಪುದ ಪರ್ಬ ಕಾರ್ಯಕ್ರಮದಲ್ಲಿ ಸಾಂಸ್ಕ್ರತಿಕ ವೈಭವಗಳನ್ನು ನೀಡುತ್ತಾ ಬಂದ ಶ್ರೇಯ ಶೆಟ್ಟಿ, ಶ್ರಾವ್ಯ ಕೃಷ್ಣ ಬಜ್ಪೆ, ಶ್ರೇಯಾ ಸನಿಲ್ ಮತ್ತು ಶ್ರಾವ್ಯ ಸನಿಲ್ ಆವಳಿ ಸಹೋದರಿಯರು ಅಡ್ಕಬಾರೆ ಸುರೇಖಾ, ಕಾವ್ಯ ಕೊಳತ್ತಮಜಲು ಅನ್ವಿತಾ ವಾಮಂಜೂರು ಹಾಗೂ ಹಾಡುಗಾರರಾದ ದಿನೇಶ್ ಇರುವೈಲು ವಿನಯಕುಮಾರ್ ಅದ್ಯಪಾಡಿ ಮಲ್ಲಿಕ ಕೈಕಂಬ ಈ ಪ್ರತಿಭಾ ಸಂಪನ್ನರನ್ನು ಸನ್ಮಾನ ನಿಡಲಾಯಿತು. ಇದೇ ಸಂದರ್ಭದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇದರ ಬೆನ್ನೆಲುಬುಗಳಾದ ರವೀಂದ್ರ ಕುಲಾಲ್, ಯೋಗೀಶ್ ಕೊಟ್ಟಾರಿ, ಸಚಿನ್ ಕೋಟ್ಯನ್ ,ಕಾರ್ತಿಕ್ ಪೂಜಾರಿ, ಹರೀಶ್ ಅಮಿನ್ ಇವರುಗಳನ್ನು ಅಭಿನಂದಿಸಲಾಯಿತು ಕಾರ್ಯಕ್ರಮದ ಆರಂಭದಲ್ಲಿ ಮೋಹನ್ ಕಳವಾರು ಸಂಗಡಿಗರಿಂದ ಸುಶ್ರಾವ್ಯ ಸ್ಯಾಕೋಪೋನ್ ವಾದನವು ಶೋತೃಗಳ ಮನರಂಜಿಸಿತು ಯಕ್ಷಮಿತ್ರರು ಸುಂಕದಕಟ್ಟೆ. ಜಗದೀಶ್ ಅಮಿನ್ ಸುಂಕದಕಟ್ಟೆ ಇವರು ಕಾರ್ಯಕ್ರಮ ಆಯೋಜನೆಯಲ್ಲಿ ಮುಖ್ಯ ಭೂಮಿಕೆಯನ್ನು ವಹಿಸಿದ್ದರು ವಿಶ್ವನಾಥ ಪೂಜಾರಿ ರೆಂಜಾಳ ಪ್ರತಿಮಾ ಆಚಾರ್ಯ ಬಡಗಬೆಳ್ಳೂರು, ಮಧುರಾಜ್ ಇವರುಗಳು ಕಾರ್ಯಕ್ರಮವನ್ನು ನಿರುಪಿಸಿದರು. ಗೂಡುದೀಪ ಹಾಗೂ ರಂಗೋಲಿ ಕಲಾವಿದರುಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
