ಮುಂಬಯಿ: ಬಂಟ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಾದ ಬೋಂಬೆ ಬಂಟ್ಸ್ ಎಸೋಸಿಯೇಶನ್ ಮುಂಬಯಿ ಇದರ 34ನೇ ವಾರ್ಷಿಕ ಮಹಾಸಭೆಯು ನವಿ ಮುಂಬಯಿ ಜುಯಿ ನಗರ ರೈಲ್ವೆ ಸ್ಟೇಷನ್ ಸಮೀಪದ ಬಂಟ್ಸ್ ಸೆಂಟರ್ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಅಸೋಸಿಯೇಶನ್ನ ಅಧ್ಯಕ್ಷ ನ್ಯಾ| ಉಪ್ಪೂರು ಶೇಖರ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯಲ್ಲಿ 2017-2919ನೇ ಸಾಲಿಗೆ ಸಂಘದ ಅಧ್ಯಕ್ಷರುಗಳ ಆಯ್ಕೆ ನಡೆದಿದ್ದು ಪ್ರಸ್ತುತ ಉಪಾಧ್ಯಕ್ಷರಾಗಿ ಸೇವಾ ನಿರತ ಅಡ್ವಕೇಟ್ ಸುಭಾಷ್ ಬಿ.ಶೆಟ್ಟಿ ಅಧ್ಯಕ್ಷರಾಗಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಪ್ರಸ್ತುತ ಉಪ್ ಕಾರ್ಯಾಧ್ಯಕ್ಷೆಯಾಗಿದ್ದ ಶಾರದಾ ಶ್ಯಾಮ ಶೆಟ್ಟಿ ಅವರನ್ನು ಮಹಾಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು.
ಸುಭಾಷ್ ಶೆಟ್ಟಿ : ಮುಂಬಯಿಯಲ್ಲಿ ಕಾರ್ಮಿಕ ಮತ್ತು ಔದ್ಯಮಿಕ ಕಾನೂನುಗಳಲ್ಲಿ ಪರಿಣತ ಕೆಲವೇ ಮಂದಿ ನ್ಯಾಯವಾದಿಗಳಲ್ಲಿ ಒಬ್ಬರೆನಿಸಿದ ಸುಭಾಷ್ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದ ಮಂಗಳೂರು ತಾಲೂಕು ಬಜ್ಪೆ ಸನಿಹದ ಪುತ್ತಿಗೆಗುತ್ತು ಪರೋಡಿ ದಿ| ಬಾಲಕೃಷ್ಣ ಶೆಟ್ಟಿ ಮತ್ತು ಕೆಂಜಾರು ಗುತ್ತು ಬಾರಿಂಜ ದಿ| ಲಕ್ಷ್ಮೀ ಶೆಡ್ತಿ ದಂಪತಿಯ ಸುಪುತ್ರ ಆಗಿದ್ದಾರೆ.
ಶಾರದಾ ಎಸ್.ಶೆಟ್ಟಿ :
ಮುಂಬಯಿಯ ಪ್ರತಿಷ್ಠಿತ ಹೊಟೇಲ್ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ, ಬಂಟ್ಸ್ ಅಸೋಸಿಯೇ ಶನ್ನ ಮಾಜಿ ಅಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ ಅವರ ಪತ್ನಿ ಆಗಿರುವ ಶಾರದಾ ಶೆಟ್ಟಿ ನಂದಳಿಕೆ ಮೂಲದವರು. ನಂದಳಿಕೆ ಐರ್ಸಬೆಟ್ಟು ದಿ| ರುಕ್ಕು ಶೆಟ್ಟಿ ಹಾಗೂ ರಾಮಕ್ಕ ಶೆಟ್ಟಿ ದಂಪತಿಯ ಸುಪುತ್ರಿ. ಕಳೆದ 16 ವರ್ಷಗಳಿಂದ ಬಂಟ್ಸ್ ಎಸೋಸಿಯೇಶನ್ನ ಮಹಿಳಾ ವಿಭಾಗದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯೆ, ಕೋಶಾಧಿಕಾರಿ, ಉಪಾಧ್ಯಕ್ಷೆ ಆಗಿ ಸೇವೆ ಸಲ್ಲಿಸಿರುವರು.

