ನವದೆಹಲಿ: ಮಾಜಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್(76) ಬಿದ್ದು ತಲೆಗೆ ಗಂಭೀರ ಗಾಯಮಾಡಿಕೊಂಡಿದ್ದು ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ತುತರ್ು ನಿಗಾಘಟಕದಲ್ಲಿ ಇರಿಸಲಾಗಿದೆ.

singh
ಮೂಲಗಳ ಪ್ರಕಾರ ಮಾಜಿ ಕೇಂದ್ರ ಸಚಿವ ಸಿಂಗ್ ಪ್ರಜ್ಞಾಹೀನನಾಗಿದ್ದಾರೆ ಎಂದು ತಿಳಿಸಿವೆ. ತನ್ನ ಮನೆಯಲ್ಲಿ ರಾತಿ ಹನ್ನೊಂದು ಗಂಟೆಯ ವೇಳೆಗೆ ಕಾಲು ಜಾರಿ ಬಿದ್ದ ಪರಿಣಾಮ ತಲೆಗೆ ಗಾಯಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.
ತಲೆಯಲ್ಲಿ ರಕ್ತ ಒಸರುತ್ತಿದ್ದು ಪ್ರಥಮ ಹಂತದಲ್ಲಿ ಶಶ್ತ್ರಚಿಕಿತ್ಸೆ ನಡೆಸಲಾಗಿದ್ದು ರಕ್ತಸ ಒಸರುವುದು ನಿಂತಿದೆ. ಬಿಜೆಪಿಯ ಹಿರಿಯ ಮುಖಂಡ ಆಸ್ಪತ್ರೆಗೆ ದೌಢಾಯಿಸಿದ್ದಾರೆ.
ಎಲ್ ಕೆ ಅಡ್ವಾಣಿಯೊಂದಿಗೆ ಸೇ ರಿ ಬಿಜೆಪಿ ಹುಟ್ಟಿಗೆ ಕಾರಣವಾಗಿದ್ದ ಜಸ್ವಂತ್ ಸಿಂಗ್ ಕಳೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಡ್ವಾಣಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ನಿಕಟವತರ್ಿಯಾಗಿದ್ದ ಜಸ್ವಂತ್ ಸಿಂಗ್ ವಾಜಪೇಯಿ ಸಂಪುಟದಲ್ಲಿ ಯೂನಿಯನ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಸ್ವತಂತ್ರ ಅಭ್ಯಥರ್ಿಯಾಗಿ ಕಣಕ್ಕಿಳಿದಿದ್ದ ಜಸ್ವಂತ್ ಸಿಂಗ್ ಸೋತಿದ್ದು ಬಿಜೆಪಿಗೆ ಮತ್ತೆ ಬರಲು ತುದಿಗಾಲಲ್ಲಿ ನಿಂತಿದ್ದರು.

 

By suddi9

Leave a Reply

Your email address will not be published. Required fields are marked *