ಮುಂಬಯಿ: ಮಹಾನಗರ ಮುಂಬಯಿಯ ಜೀವನಾಡಿ ಎಂದೇ ಕರೆಯಲ್ಪಡುವ ಸ್ಥಾನೀಯ ರೈಲು ಸಂಚಾರದ ತ್ರಿಮಾರ್ಗಗಳಲ್ಲಿ ಒಂದಾದ ಮಧ್ಯ ರೈಲ್ವೇಯ ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ಠಾಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ದುರಂತದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಸದಸ್ಯೆಯರು ವಿಧಿವಶರಾಗಿದ್ದಾರೆ. ಸುಜತಾ ಪಿ.ಆಳ್ವ (42) ಮತ್ತು ಸುಮಾಲತಾ ಸಿ.ಶೆಟ್ಟಿ (45) ಇವರೇ ಮೃತ ದುರ್ದೈವಿಗಳು.
ಚಿತ್ರ-1: ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಪ್ರದರ್ಶನಗೊಂಡ ನಾಟಕ ತಜ್ಞ, ಪ್ರಶಸ್ತಿ ವಿಜೇತ ಸಾ.ದಯಾ (ದಯಾನಂದ್ ಸಾಲ್ಯಾನ್) ರಚಿಸಿ ನಿರ್ದೇಶಿಸಿದ `ಅಬ್ಬ’ ಕನ್ನಡ ನಾಟಕ ನಾಟಕದಲ್ಲಿ ಪಾತ್ರಭಿನಯಿಸಿದ ಸುಜತಾ ಆಳ್ವ , ಸುಮಲತಾ ಸಿ.ಶೆಟ್ಟಿ
