ಕೊಡ್ಮಾಣ್:ಕರ್ತವ್ಯವನ್ನು ಮಾಡು ಮತ್ತು ದೇವರ ಮೇಲೆ ಅಚಲ ಭಕ್ತಿಯನ್ನು ಇಡು ಎಂದು ಭಗವದ್ಗೀತೆಯನ್ನು ಭೋಧಿಸಿದ ಶ್ರೀ ಕೃಷ್ಣನು ದ್ವಾಪರಯುಗದಲ್ಲೇ ಸಾರಿದ್ದಾನೆ. ಧರ್ಮದ ಬಗ್ಗೆ ಇಂದಿನ ಪೀಳಿಗೆಗೆ ಮನದಟ್ಟಾಗುವಂತೆ ಸಮೂಹ ಮಾಧ್ಯಮಗಳ ಮೂಲಕ ತಿಳಿಸಿ ಕೊಡುವುದು ಬಹಳ ಅಗತ್ಯ.ತಾತ್ಕಲಿಕ ಆಸೆ ಆಮಿಷಗಳಿಗೆ ಬಲಿಯಾಗಿ ಮತಾಂತರಗೊಳ್ಳುವುದನ್ನು ಈ ಮೂಲಕ ತಪಿಸುವುದು ಬಹಳ ಅಗತ್ಯವೆಂದು ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಕೊಡ್ಮಾಣ್ ಶ್ರೀ ಶಾರದೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

IMG_9219

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯ ಡಾ|| ಎಂ.ಮೋಹನ ಆಳ್ವ ರವರು ಮಾತನಾಡಿ ಮುಂದುವರಿದ ರಾಷ್ಟ್ರಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು ಕಡಿಮೆಯಾಗುತ್ತಿದೆ.ಆದರೆ ನಮ್ಮಲ್ಲಿ ಧಾರ್ಮಿಕ ಚಿಂತನೆಗಳು ರಕ್ತಗತವಾಗಿ ಬಂದಿದೆ. ವೇದಿಕೆಯಲ್ಲಿ ಶ್ರೀ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಮಾಲಕರು ಮಂಗಳೂರು ಶುಭ ಬೀಡಿಗಳು,ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಂಟ್ವಾಳ ತಾಲೂಕು ಸಂಘ ಚಾಲಕ್ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ,ಕಾರ್ಯದರ್ಶಿ ವಿನೋದ್ ಕುಮಾರ್ ಕೊಡ್ಮಾಣ್, ಮಹಿಳಾ ಸಮಿತಿಯ ಲೀಲಾವತಿ ಕಲ್ಲಜಾಲ್, ಗೀತಾ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರು ಸ್ವಾಗತಿಸಿದರು.ಉತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲ್ ಕುಲಾಲ್ ಗೋವಿಂತೋಟ ವಂದಿಸಿದರು.ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *