ಮಂಗಳೂರು:ವಳಚ್ಚಿಲ್ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜಿನ ಶೆಫ್ ಆನ್ ವೀಲ್ಸ್‍ನ ಆಶ್ರಯದಲ್ಲಿ ನಡೆದ ಅಡುಗೆ ಸ್ಪರ್ಧೆ(ಮಾಸ್ಟರ್ ಶೆಫ್ ಫುಡ್ ಕಾಂಪಿಟೇಶನ್) ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.ಎಕ್ಸ್‍ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಉಷಾಪ್ರಭಾ ಎನ್.ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್ ಅಡುಗೆ ಸ್ಪರ್ಧೆಯನ್ನು ಉದ್ಘಾಟಿಸಿದರು.13

02

03

ಉಷಾಪ್ರಭಾ ಎನ್. ನಾಯಕ್, ಉಸ್ತಾದ್ ರಫೀಕ್ ಖಾನ್, ಮಣಿಪಾಲ್ ಇಂಟಿಗ್ರೇಟೆಡ್ ಸರ್ವಿಸಸ್(ಎಂಐಎಸ್)ನ ಸಿಇಒ ಆನಂದ್ ಸುಂದರ್‍ರಾಜ್, ಕಾಲೇಜಿನ ಶೈಕ್ಷಣಿಕ ಕೌನ್ಸಿಲರ್ ಅನಿತಾ ವಿಜ್ ಪಾಲ್ ತೀರ್ಪುಗಾರರಾಗಿ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್, ಶೆಫ್ ಆನ್ ವೀಲ್‍ನ ಜನರಲ್ ಮ್ಯಾನೇಜರ್ ಎಡ್ವಿನ್ ಕ್ಯಾಸ್ಟಿಲಿನೋ, ಕಾರ್ಪೊರೇಟ್ ಶೆಫ್ ದಿನೇಶ್ ಪಳ್ಳಿಯಿಲ್, ಕಾರ್ಯಕ್ರಮ ನಿರ್ದೇಶಕಿ ವಿದ್ಯಾಶಾರದಾ ಜಿ.ಕೆ. ಉಪಸ್ಥಿತರಿದ್ದರು.07

05

06

ಕಾಲೇಜಿನ ಉಪನ್ಯಾಸಕರ ಸಹಿತ ವಿದ್ಯಾರ್ಥಿಗಳನ್ನೊಳಗೊಂಡ 11 ತಂಡಗಳು ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ರಕ್ಷಿತ್ ಎಂ.ಆರ್. ತಂಡ(ಪ್ರಥಮ), ದಿವ್ಯ ತಂಡ(ದ್ವಿತೀಯ), ಡಾ.ವಿನಯಚಂದ್ರ ತಂಡ(ತೃತೀಯ) ವಿಜೇತರಾದರು.30

28

29

By Suddi9

Leave a Reply

Your email address will not be published. Required fields are marked *