ಮಂಗಳೂರಿನಿಂದ ಮೊಂಟೆಪದವು ಮೂಲಕ ಮುಡಿಪುವರೆಗೆ ಸರಕಾರಿ ಬಸ್ಸಿಗೆ ಒತ್ತಾಯಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮೊಂಟೆಪದವು ಭಾಗದ ಬಹು ಜನರ ಬೇಡಿಕೆಯಾದ ಸರಕಾರಿ ಬಸ್ಸ್ ತಮ್ಮ ಊರಿನ ರಸ್ತೆಯಲ್ಲಿ ಒಡಾಡಬೇಕೆಂಬುದು. ಆದರೆ ಇಲ್ಲಿ ಖಾಸಗಿ ಬಸ್ಸಿನವರದೇ ಅಧಿಪತ್ಯ. ಬಸ್ಸಿನ ಸಾಮರ್ಥ್ಯಕ್ಕೆ ಹೆಚ್ಚಾಗಿ ಜನರನ್ನು ಬಸ್ಸಿನಲ್ಲಿ ತುಂಬಿಸುವುದು. ವಿದ್ಯಾರ್ಥಿಗಳು ಇದ್ದರೆ ಬಸ್ಸು ನಿಲ್ಲಿಸದೇ ಇರುವುದು ಈ ಎಲ್ಲಾ ಸಮಸ್ಯೆಗಳಿಂದಾಗಿ ಈ ಭಾಗಕ್ಕೆ ಸರಕಾರಿ ಬಸ್ಸು ಬೇಕೆಂದು ವಿದ್ಯಾರ್ಥಿಗಳು SFI ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿತ್ತು. ಮಾತ್ರವಲ್ಲದೆ DYFI ನೇತ್ರತ್ವದಲ್ಲಿ ಸಾರ್ವಜನಿಕರನ್ನು ಸೇರಿಸಿ RTO ಕಛೇರಿ ಎದುರು ಪ್ರತಿಭಟನೆಯನ್ನು ಕೂಡ ಮಾಡಿತ್ತು. ಪ್ರತಿಭಟನೆಗೆ ಮಣಿದು ಕೆಲವು ಪ್ರದೇಶಗಳಿಗೆ ಬಸ್ಸ್ ಹಾಕಿತ್ತು.ಆದರೆ ಮೊಂಟೆಪದವು ಭಾಗಕ್ಕೆ ಸರಕಾರಿ ಬಸ್ಸ್ ಹಾಕದೇ ವಂಚಿಸಿತ್ತು. ಇಲ್ಲಿ ಖಾಸಗಿ ಬಸ್ಸ್ ಮಾಲಕರ ಲಾಭಿ ಜೋರಾಗಿದೆ. ಸರಕಾರಿ ಬಸ್ಸ್ ಬರದಂತೆ ತಡೆಯುತ್ತಿದ್ದಾರೆ. ಈಗ ಮತ್ತೆ ಸಾರ್ವಜನಿಕರು DYFI ನೇತ್ರತ್ವದಲ್ಲಿ ಪ್ರತಿಭಟನೆ ಮುಂದಾಗಿದ್ದಾರೆ. ಅದರ ಮೊದಲ ಭಾಗವಾಗಿ ಮೊಂಟೆಪದವು ಪ್ರದೇಶದ ಜನರ ಐನ್ನೂರಷ್ಟು ಸಹಿ ಸಂಗ್ರಹಿಸಿ ಇಂದು RTO ಅಧಿಕಾರಿಯವರಿಗೆ ಮನವಿಯನ್ನು ಮಾಡಿತ್ತು.
ನಿಯೋಗದಲ್ಲಿ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, DYFI ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್, ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸ್ಥಳೀಯರಾದ ಆಶ್ರಪ್ ಅಂಗಡಿ, DYFI ಮೊಂಟೆಪದವು ಮುಖಂಡರಾದ ವಿಶ್ವನಾಥ್ ಮೊಂಟೆಪದವು, ಶಂಶುದ್ದಿನ್, ಜಾಫರ್, ಮಹರೂಪ್ ಮುಂತಾದವರು ಉಪಸ್ಥಿತಿರಿದ್ದರು*


