ವಿಟ್ಲ: ಅಧ್ಯಾಪಕರ ಸಹಕಾರ ಸಂಘದ 34 ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಮೇಶ್ ನಾಯಕ್  ಅವರ  ಅಧ್ಯಕ್ಷತೆಯಲ್ಲಿ ವಿಟ್ಲ ಮಾದರ ಶಾಲಾ ಸಭಾ ಭವನದಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ಬಂಟ್ವಾಳ ಕರ್ನಾಟಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಮಾನಾಥ ರೈ ಹಾಗೂ ನವೀನ್ ಪಿ ಎಸ್ ಭಾಗವಹಿಸಿದ್ದರರು. ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರುಗಳಾದ ರಮೇಶ್ ಬಾಯಾರು, ಜೋಯ್ಸ್ ಹೆನ್ರಿಟಾ ಮಂಗಳೂರು ಮತ್ತು ಅಬ್ದುಲ್ ರಝಾಕ್ ಕಾಟಿಪಳ್ಳ, ಜಿಲ್ಲಾ ಪ್ರಶಸ್ತ ಪಡೆದ ಶಾರದಾ ಪದಂಗಡಿ, ಮಹಾದೇವ, ಶಂಕರ ಮಧ್ಯ, ನಾರಾಯಣ ಪೂಜಾರಿ ಮಜಿ, ಆದಂ ವಗ್ಗ, ನಿಂಗರಾಜು ಇವರನ್ನು ಸನ್ಮಾನಿಸಲಾಯಿತು.

1 (2)

ಸದಸ್ಯರ ಮಕ್ಕಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಘದ ಸದಸ್ಯರಾಗಿದ್ದು ನಿಧನ ಹೊಂದಿದ 18 ಮಂದಿಗೆ ಸಂತಾಪ ಸೂಚಿಸಲಾಯಿತು. ಸಂಘವು ವರದಿ ವರ್ಷದಲ್ಲಿ ರೂ 1,47,39,400.36 ಲಾಭ ಗಳಿಸಿದ್ದು ಶೇ 18 ಡಿವಿಡೆಂಡ್ ವಿತರಿಸಲಾಗುವುದು ಎಂದು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.1 (1)

ಸಂಘದ ನಿರ್ದೇಶಕರುಗಳಾದ ಜೆಸಿಂತಾ ಸೋಫಿಯಾ ಮಸ್ಕರೇನಸ್, ಕುಂಞ ನಾಯ್ಕ, ನವೀನ್ ಕೋಣಾಜೆ, ವಾಸುದೇವ ಗೌಡ, ಕಮಲಾಕ್ಷ, ಜಗನ್ನಾಥ ಎಂ, ಸೇಸಪ್ಪ ಮೂಲ್ಯ, ಚಿತ್ರಕಲಾ, ಸಂಜೀವ ಹೆಚ್, ರಾಜೇಂದ್ರ ರೈ, ಬಾಬು ಗೌಡ, ಯನ್ ಆನಂದ, ಸುರೇಶ್ ಕುಮಾರ್, ಪ್ರಭಾಕರ ಇವರು ವೇದಿಕಯಲ್ಲಿದ್ದರು. ಅಧ್ಯಕ್ಷರು ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಕೃಷ್ಣ ಪ್ರಕಾಶ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷ ಮೋನಪ್ಪ ಕೆ ವಂದಿಸಿದರು.

By Suddi9

Leave a Reply

Your email address will not be published. Required fields are marked *