ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಪ್ರಾಯೋಕತ್ವದಲ್ಲಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭವು ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷರಾದ ರೋ|| ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ರೋಟರಿ ಮಾಜಿ ಗವರ್ನರ್ ರೋ|| ಕಿರಣ್ ಹೆಗ್ಡೆಯವರು ದೀಪ ಬೆಳಗಿಸುವ ಮೂಲಕ ಕ್ಲಬ್‍ನ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು “ವಿದ್ಯಾರ್ಥಿಗಳಲ್ಲಿ ಹುದುಗಿರುವ ನಾಯಕತ್ವದ ಗುಣ , ಸಮಯ ಪಾಲನೆ ಮುಂತಾದ ಕಾರ್ಯಕ್ಷಮತೆಯನ್ನು ಹೊರತರಲು ಇಂಟರ್ಯಾಕ್ಟ್ ಕ್ಲಬ್ ನೆರವಾಗುತ್ತದೆ” ಎಂದು ಹೇಳಿದರು. ಶಾಲಾ ಸಂಚಾಲಕರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜೆ. ಪ್ರಹ್ಲಾದ್.ಶೆಟ್ಟಿಯವರು ಮಾತನಾಡಿ “ನಮ್ಮ ವಿದ್ಯಾಸಂಸ್ಥೆಯ ಮಕ್ಕಳು ಎಲ್ಲಾ ಆಯಾಮಗಳಲ್ಲಿ ಯಶಸ್ವಿಯಾಗಿ ಬೆಳೆಯಬೇಕೆನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ” ಬಂಟ್ವಾಳ ಟೌನ್ ರೋಟರಿ ಕ್ಲಬ್‍ನ ಸದಸ್ಯರಾದ ರೋ| ಪ್ರಕಾಶ್ ಕಾರಂತ್ ರವರು ಮಾತನಾಡಿ “ ರೋಟೇರಿಯನ್ಸ್ ಎಂದರೆ ಸೇವೆಯನ್ನು ಮನಸ್ಸಿನಲ್ಲಿರಿಸಿ, ಅದನ್ನು ಔನತ್ಯಕೇರಿಸುವವರು ಎಂದರು” .ಶಾಲಾ ಆಡಳಿತಾಧಿಕಾರಿ ಸಿ. ಶ್ರೀಧರ್ ಮಾತನಾಡಿ “ನಮ್ಮ ಸಂಸ್ಥೆಯಲ್ಲಿರುವ ಕೊರತೆಗಳನ್ನು ಹುಡುಕಿ ನೀಗಿಸಲು ಇಂತಹ ಸಂಸ್ಥೆಗಳು ಪರಿಣಾಮಕಾರಿ ಎಂದರು. ಶಾಲಾ ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷ ಎಸ್.ಮೊಹಮ್ಮದ್ ಆಶಿಕ್ ತನ್ನ ಅನಿಸಿಕೆ ತಿಳಿಸಿದರು.
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇದರ ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ನಿಯೋಜಿತ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ಯಜ್ಞೇಶ್ವರಿ ಎಸ್.ಶೆಟ್ಟಿ ಪದಾಧಿಕಾರಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಬಂಟ್ವಾಳ ಟೌನ್ ರೋಟರಿ ಕ್ಲಬ್‍ನ ಸದಸ್ಯರಾದ ರೋ| ಪುಷ್ಪರಾಜ್ ಹೆಗ್ಡೆ, ರೋ| ಜಯರಾಜ್ ಬಂಗೇರ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಬಿ.ಎಸ್.ನಾೈಕ್ , ಮುಖ್ಯೋಪಾಧ್ಯಾಯಿನಿಯವರಾದ ವಿಜಯಲಕ್ಷ್ಮೀ ವಿ.ಶೆಟ್ಟಿ ಹಾಗೂ ಗ್ರೇಸ್ ಪಿ.ಸಲ್ಡಾನ ಉಪಸ್ಥಿತರಿದ್ದರು.
ರೋ|| ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಬಂಟ್ವಾಳ ರೋಟರಿ ಕ್ಲಬ್‍ನ ಕಾರ್ಯದರ್ಶಿ ರೋ| ಉಮೇಶ್ ನಿರ್ಮಲ್ ರವರು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಇಂಟರ್ಯಾಕ್ಟ್ ಕ್ಲಬ್‍ನ ಸಂಯೋಜಕರಾದ ದಿನಕರ್ ಪೂಜಾರಿಯವರು ಕಾರ್ಯಕ್ರಮ ನಿರ್ವಹಿಸಿದರು.



