ಬಂಟ್ವಾಳ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಕ್ಲಬ್ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕಾಡುಮಠ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.15bhsaletturಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಭಾಗವಹಿಸಿದರು. ದುಶ್ಚಟದಿಂದ ದೂರವಿರಿ ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಡಾ. ಹೆಗ್ಗಡೆಯವರು ಆಯೋಜನೆ ಮಾಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದರೊಂದಿಗೆ ಆರೋಗ್ಯಕ್ಕೆ ಹಾನಿಕಾರಕವಾಗುವ ವಸ್ತುವನ್ನು ಜೀವನದಲ್ಲಿ ಬಳಸಬಾರದು ಎಂಬ ಸಂದೇಶವನ್ನು ನೀಡಿರುತ್ತಾರೆ. ನಮ್ಮ ಪೀಳಿಗೆಗೆ ಪರಿಸರಕ್ಕೆ ಉತ್ತಮ ಹೆಸರು ತಂದು ಕೊಳ್ಳುವ ಪ್ರಯತ್ನ ಮಾಡಬೇಕು. ದುಶ್ಚಟ ಮುಕ್ತ ಬದುಕು ರೂಪಿಸಿಕೊಳ್ಳಬೇಕೆಂದರೆ ಸಮಾಜದಲ್ಲಿ ಇಂತಹ ಚಟಕ್ಕೆ ಬೀಳದಂತೆ ಎಚ್ಚರ ವಹಿಸಬೇಕು. ಹೊರ ಪ್ರಪಂಚದಲ್ಲಿ ಇದಕ್ಕೆ ಪೂರಕವಾದ ತುಂಬಾ ಕಾರ್ಯಕ್ರಮಗಳನ್ನು ನೋಡುತ್ತೇವೆ. ಇಂತಹ ಸಂದರ್ಭಕ್ಕೆ ಬಲಿಯಾಗದೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಕೊಡಬೇಕೆಂದು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಸಾಲೆತ್ತೂರು ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ವಸಂತ ಪ್ರಭು, ಶಾಲಾ ಅಧ್ಯಪಕರಾದ ಪರಮೇಶ್ವರ ಭಟ್ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಮಮತಾರವರು ನಿರೂಪಿಸಿ, ಶಾಲಾ ಅಧ್ಯಾಪಕರಾದ ರಾಜೀವ ಧನ್ಯವಾದವಿತ್ತರು.

By Suddi9

Leave a Reply

Your email address will not be published. Required fields are marked *