ಕೊಳ್ನಾಡು ಗ್ರಾಮದ ಕಲ್ಕಾಜೆ ಎಂಬಲ್ಲಿರುವ ಅಪ್ಪು ನಲಿಕೆಯವರ ಮನೆಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಉಪಸಮಿತಿ ವಿಟ್ಲ ಇದರ ವತಿಯಿಂದ ಸಂಘದ ಸದಸ್ಯ ಶ್ರೀರಾಮ ಇಲೆಕ್ಟ್ರಿಕಲ್ಸ್‍ನ ರಾಮ ರವರು ಉಚಿತವಾಗಿ ವಿದ್ಯತ್ ಸಂಪರ್ಕ ಒದಗಿಸಿರುತ್ತಾರೆ. ವಿಟ್ಲ ಮೆಸ್ಕಾಂ ಉಪ ವಿಭಾಗದ ಸಹಾಯಕ ಅಭಿಯಂತರ ಪ್ರವೀಣ್ ಜೋಷಿ ಈ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾಲೆತ್ತೂರು ಶಾಖಾಧಿಕಾರಿ ದೇವಿಕಿರಣ್, ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ ಬಾಬು ಮೂಲ್ಯ, ಉಪಸಮಿತಿ ಕಾರ್ಯದರ್ಶಿ ಎಂ ಕೇಶವ, ಜೊತೆ ಕಾರ್ಯದರ್ಶಿ ಮಹಮ್ಮದ್ ಬೈರಿಕಟ್ಟೆ, ಲೈನ್ ಮ್ಯಾನ್ ಚಂದ್ರಹಾಸ, ಸಮಿತಿ ಸದಸ್ಯ ರಾಜೇಶ್ ಡಿ ಸೋಜಾ, ಕರುಣಾಕರ, ಚಂದ್ರಶೇಖರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

img313

By Suddi9

Leave a Reply

Your email address will not be published. Required fields are marked *