ಬಂಟ್ವಾಳ : ದ.ಕ.ಜಿ.ಪಂ.ಮಂಗಳೂರು , ತಾ.ಪಂ.ಬಂಟ್ವಾಳ, ನರಿಕೊಂಬು ಗ್ರಾ.ಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ. ಮತ್ತು ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ನರಿಕೊಂಬು ಗ್ರಾ.ಪಂ. ವ್ಯಾಪ್ತಿಯಲ್ಲಿ ಮ.ಗಾ.ರಾ.ಗ್ರಾ.ಉ.ಖಾ. ಯೋಜನೆಯಡಿ ನಿರ್ಮಿಸಲಾದ ನಿನ್ನಿಪಡ್ಪು ಅಂಗನವಾಡಿ ಕೇಂದ್ರ ಕಟ್ಟಡವನ್ನುಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಜಿ.ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರಾ, ತಾ.ಪಂ.ಸದಸ್ಯೆ ಗಾಯತ್ರಿ ರ ವೀಂದ್ರ ಸಪಲ್ಯ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ , ಉಪಾಧ್ಯಕ್ಷ ರಾಜೀವಿ , ಸಿಡಿಪಿಓ ಮಲ್ಲಿಕಾ, ಮೇಲ್ವಿಚಾರಕಿ ಉಷಾ ಎಂ., ಇಂಜಿನಿಯರ್ ನರೇಂದ್ರ ಬಾಬು, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಸಹಾಯಕ ನಿರ್ದೆಶಕರಾದ ಕು.ದಯಾವತಿ, ಪಂ.ಅಭಿವೃದ್ಧಿ ಅಧಿಕಾರಿ ಶಿವಾನಂದ ಪೂಜಾರಿ, ಗ್ರಾ.ಪಂ.ಸದಸ್ಯರಾದ ರವಿಂದ್ರ ಸಪಲ್ಯ , ದಿವಾಕರ ಶಂಭೂರು , ವಿಶ್ವನಾಥ ಪೂಜಾರಿ ಕೊಡಂಗೆಕೋಡಿ, ಸುಲೇಮಾನ್ ನೆಹರೂನಗರ, ರಂಜಿತ್ ಕೆದ್ದೇಲು, ಉದಯ ಶಾಂತಿಲ, ಜಯರಾಜ್, ಹೇಮಲತಾ, ಜುಬೈದಾ, ನವೀನ ಪುತ್ರೊಟಿಬೈಲು, ಮಾಧವ ಕರ್ಬೆಟ್ಟು, ಮೆಸ್ಕಾಂ ನಿರ್ದೇಶಕ ವೆಂಕಪ್ಪ ಪೂಜಾರಿ, ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು, ಗ್ರಾ.ಪಂ.ಮಾಜಿ ಅಧ್ಯಕ್ಷ ಆನಂದ ಸಾಲಿಯಾನ್, ಮಾಜಿ ತಾ.ಪಂ.ಉಪಾಧ್ಯಕ್ಷ ಆನಂದ ಎ ಶಂಭೂರು ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿ ಅಧ್ಯಕ್ಷ ಕಿಶೋರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಯಶೋಧ ವರದಿ ವಾಚಿಸಿ, ವಸಂತ ಭೀಮ ಗದ್ದೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವೀರಕಂಭ ಪ್ರಭಾರ ಪಂ.ಅಭಿವೃದ್ಧಿ ಅಧಿಕಾರಿ ಗಿರಿಜ ಪಿ., ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪುಷ್ಪಲತಾ, ಸ್ಥಳ ದಾನಿ ಮಾರಪ್ಪ ಪೂಜಾರಿ ದೋಟ, ಬಾಲವಿಕಾಸ ಸಮಿತಿ ಅಧ್ಯಕ್ಷ ಕಿಶೋರ್ ಶೆಟ್ಟಿ, ಕಟ್ಟಡ ಸಾಗ್ರಿ ಸರಬರಾಜುದಾರ ನಾಗೇಶ್ ಕುಲಾ ರವರನ್ನು ಸನ್ಮಾನಿಸಲಾಯಿತು.

